OMG..!!| ತಮ್ಮ ಮುದ್ದಿನ ನಾಯಿಗೆ ತಿರುಗಾಡಲು 4 ಕೋಟಿ ಮೌಲ್ಯದ ಮರ್ಸಿಡಿಸ್‌ ಕಾರು ಖರೀದಿಸಿದ ಅಂಬಾನಿ..!!|

ನವದೆಹಲಿ: ಉದ್ಯಮ ದಿಗ್ಗಜ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಪುತ್ರನ ಮದುವೆಯ ವೈಭೋಗವನ್ನು ನೋಡದವರುಂಟೇ? ಇಡೀ ಜಗತ್ತೇ ತಿರುಗಿ ನೋಡುವಂತೆ 5000 ಕೋಟಿ ರು.ಗೂ ಹೆಚ್ಚಿನ ವೆಚ್ಚದಲ್ಲಿ ಮಗನ ಮದುವೆ ಮಾಡಿಸಿದ ಅಂಬಾನಿ ಕುಟುಂಬ ಇದೀಗ ಮತ್ತೊಂದು ಸುದ್ದಿಯ ಮೂಲಕ ಎಲ್ಲರ ಮೂಗಿನ ಮೇಲೆ ಬೆರಳೇರುವಂತೆ ಮಾಡಿದ್ದಾರೆ. ಹೌದು, ಮುಕೇಶ್ ಅಂಬಾನಿ ಮನೆತನದ ಪ್ರೀತಿಯ ನಾಯಿಯ ಓಡಾಟಕ್ಕೆ ಅಂತಲೇ ಅಂಬಾನಿ ಕುಟುಂಬ ಬರೋಬ್ಬರಿ 4 ಕೋಟಿ ಮೌಲ್ಯದ ಮರ್ಸಿಡಿಸ್‌ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.



ಅನಂತ್ ಅಂಬಾನಿಯವರ ಮುದ್ದಿನ ನಾಯಿ ಗೋಲ್ಡನ್ ರಿಟ್ರೈವರ್ ತಳಿಯ ಹ್ಯಾಪಿ ಶ್ವಾನವನ್ನು ಹೆಚ್ಚಾಗಿ ವೀಡಿಯೊಗಳಲ್ಲಿ ಕಾಣಬಹುದು. ಮದುವೆಯ ಸಂದರ್ಭದಲ್ಲೂ ದಿನಕ್ಕೊಂದು ಬಗೆಯ ದಿರಿಸಿನಲ್ಲಿ ಈ ಶ್ವಾನ ಕಂಗೊಳಿಸಿತ್ತು. ಈಗ ಪ್ರೀತಿಯ ಶ್ವಾನದ ಓಡಾಟಕ್ಕೆ ಈ ದುಬಾರಿ ವಾಹನ ತರಲಾಗಿದೆ. ಇದಕ್ಕೂ ಮೊದಲು ಹ್ಯಾಪಿ ಟೊಯೋಟಾ ಫಾರ್ಚುನರ್ ಮತ್ತು ಟೊಯೋಟಾ ವೆಲ್‌ಫೈರ್‌ನಲ್ಲಿ ಪ್ರಯಾಣಿಸುತ್ತಿತ್ತು ಈ ಎರಡೂ ವಾಹನಗಳು ಸಾಕಷ್ಟು ದುಬಾರಿಯಾಗಿದ್ದು, ಫಾರ್ಚುನರ್ ಬೆಲೆ ಸುಮಾರು 50 ಲಕ್ಷ ಮತ್ತು ವೆಲ್‌ಫೈರ್‌ನ ಬೆಲೆ ಸುಮಾರು 1.5 ಕೋಟಿ.

ಅಂಬಾನಿ ಕುಟುಂಬವು  G63 AMG SUV ಗಳ ಫ್ಲೀಟ್‌ಗೆ ಹೆಸರುವಾಸಿಯಾಗಿದೆ, ಈ ಕಾರು ಅವರ ಭದ್ರತಾ ಬೆಂಗಾವಲಿನ ಭಾಗವಾಗಿದೆ. ಅವರು ಹಲವಾರು G63 AMG ಮಾದರಿಗಳನ್ನು ಹೊಂದಿದ್ದರೂ ಸಹ ಇದೀಗ G400d  ಮತ್ತೊಂದು ಸೇರ್ಪಡೆಯಾಗಿದೆ. ಇತರವುಗಳಿಗಿಂತ ಇದು ಭಿನ್ನವಾಗಿದೆ, ಇದು ಡಿಸೇಲ್ ಮಾದರಿ SUV ಕಾರು ಆಗಿದೆ ಮತ್ತು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ.ಹ್ಯಾಪಿಯ ಭದ್ರತೆಗಾಗಿ ಇದರಲ್ಲಿ ಸಾಕಷ್ಟು ವ್ಯವಸ್ಥೆಗಳನ್ನುಮಾಡಲಾಗಿದೆ. ಈ ಸುದ್ದಿಯ ಮೂಲಕ ಅಂಬಾನಿ ಮನೆತನ ಮತ್ತೊಮ್ಮೆ ಸುದ್ದಿಯಾಗಿದೆ.