MANGALORE: ಜಿಲ್ಲಾ ತ್ರೈ ಮಾಸಿಕ‌ ಕೆಡಿಪಿ ಸಭೆ: ಸಭೆಯಲ್ಲಿ ಶಾಸಕ ಅಶೋಕ್ ರೈ ಕೆಂಡಾಮಂಡಲ

ವರದಿ: ಕವಿತಾ ಕೆ ಮಾಣಿ

ಮಂಗಳೂರು: ಕೊಳವೆ ಬಾವಿ ತೆಗೆದರೆ ಅದಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಾದಲ್ಲಿ ಟ್ರಾನ್ಸ್ ಫಾರ್ಮರ್ ಅಳವಿಡಿಸಲೇಬೇಕು, ಇಲ್ಲದೇ ಇದ್ದಲ್ಲಿ ಕನೆಕ್ಷನ್ ಕೊಡುವುದೇ ಇಲ್ಲ ಇದು ಯಾವ ಕಾನೂನು. ಮೆಸ್ಕಾಂ ನವರ ವಿಳಂಭ ಕೆಲಸಕ್ಕೆ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. 

ಮೆಸ್ಕಾಂ ನವರು ಟ್ರಾನ್ಸ್ ಫಾರ್ಮರ್ ಅಳವಡಿಸುವಾಗ ಮೂರರಿಂದ ನಾಲ್ಕು ತಿಂಗಳು ಬೇಕಾಗ್ತದೆ ಅಷ್ಟರವರೆಗೆ ಬೋರ್ ವೆಲ್ ಗೆ ಕರೆಂಟ್ ಕನೆಕ್ಷನ್ ಕೊಡುತ್ತಿಲ್ಲ ಈ ನಿಯಮದಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ ತಕ್ಷಣ ಈ ನಿಯಮ ತೆಗೆದು ಹಾಕಿ ಎಂದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹಿಸಿದರು. 



ಶಾಸಕರ ಮಾತಿಗೆ ವಿಧಾನಪರಿಷತ್ ಸದಸ್ಯರಾದ ಐವನ್ ಎಇಸೋಜಾ ದನಿಗೂಡಿಸಿದ್ದಾರೆ. ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ ಉಸ್ತುವಾರಿ ಸಚಿವರೂ ಸಭೆಯ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಮಾತನಾಡಿ ಈ ನಿಯಮ ಮಾಡಿ ಎಂದು ನಿಮಗೆ ಹೇಳಿದವರು ಯಾರು? ನಿಮ್ಮಷ್ಡಕ್ಕೆ ನೀವು ಕಾನೂನು ರೂಪಿಸುವುದಾ? ಎಂದು ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡು ತಕ್ಷಣವೇ ಈ ನಿಯಮ ತೆಗೆದು ಹಾಕಿ. ಬೋರ್ ವೆಲ್ ತೆಗೆದರೆ ತಕ್ಷಣ ವಿದ್ಯುತ್ ಸಂಪರ್ಕ ಕೊಡಿ ಎಂದು ಸಚಿವರು ಸೂಚನೆಯನ್ನು ನೀಡಿದರು.