Kukke subrahmya:- ಟೀಂಇಂಡಿಯಾದ ತ್ರೋಡೌನ್ ತಜ್ಞ ರಾಘವೇಂದ್ರರಿಂದ ಮಹಾಭಿಷೇಕ

 ವರದಿ:- ಪ್ರಕಾಶ್ ಕೋಡಿಂಬಾಳ 


ಸುಬ್ರಹ್ಮಣ್ಯ

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬುಧವಾರ ಟೀಂ ಇಂಡಿಯಾದ ತ್ರೋಡೌನ್ ತಜ್ಞ ರಾಘವೇಂದ್ರ ಬುಧವಾರ ಭೇಟಿ ನೀಡಿದರು.ಆರಂಭದಲ್ಲಿ ಶ್ರೀ ದೇವರ ದರುಶನ ಮಾಡಿದ ಅವರು ಸಂಕಲ್ಪ ಮಾಡಿದರು. ಬಳಿಕ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಮರ್ಪಿಸಿದರು.ಈ ಹಿಂದೆ ಕುಕ್ಕೆಗೆ ಬಂದು ಟೀಂಇAಡಿಯಾ ವಿಶ್ವಚಾಂಪಿಯನ್ ಆದರೆ ಸೇವೆ ನೆರವೇರಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.ಈ ಪ್ರಕಾರ ಬುಧವಾರ ಸುಬ್ರಹ್ಮಣ್ಯನಿಗೆ ಸೇವೆ ಸಮರ್ಪಿಸಿದರು. 

 ಇವರಿಗೆ ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ಮತ್ತು ಮಹಾಭಿಷೇಕದ ಪ್ರಸಾದ ನೀಡಿದರು.ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ತೆರಳಿದ ಅವರನ್ನು ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಸ್ವಾಗತಿಸಿದರು.ಈ ಸಂದರ್ಭ ಶ್ರೀ ದೇವಳದ ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಹರೀಶ್, ಶ್ರೀ ದೇವಳದ ಕೃಷ್ಣಪ್ರಸಾದ್ ಕೆ.ಜಿ ಭಟ್, ಸುಬ್ರಹ್ಮಣ್ಯದ ಅವರ ಸ್ನೇಹಿತರಾದ ಪಪ್ಪು ಲೋಕೇಶ್, ದೀಪಕ್ ನಂಬಿಯಾರ್ ಉಪಸ್ಥಿತರಿದ್ದರು.