ಕಂಗನಾಗೆ ಕಪಾಳಮೋಕ್ಷಗೈದ ಸಿಐಎಸ್‌ಎಫ್ ಕಾನ್‌ಸ್ಟೇಬಲ್‌‌ಗೆ ಅಮಾನತು ಮುಂದುವರಿಕೆ : ಸಿಐಎಸ್‌ಎಫ್‌ ಸ್ಪಷ್ಟನೆ



ಹೊಸದಿಲ್ಲಿ: ನೂತನ ಸಂಸದೆಯಾಗಿ ಆಯ್ಕೆಯಾದ ಬೆನ್ನಲ್ಲೇ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷಗೈದ ಆರೋಪ ಹೊತ್ತು ಸೇವೆಯಿಂದ ಅಮಾನತುಗೊಂಡಿದ್ದ ಸಿಐಎಸ್‌ಎಫ್ ಕಾನ್‌ಸ್ಟೇಬಲ್‌ ಕುಲ್‌ವಿಂದ‌ರ್ ಕೌ‌ರ್ ಅವರನ್ನು ಇನ್ನೂ ಅಮಾನತಿನಲ್ಲಿದ್ದಾರೆ. ಆಕೆಯ ವಿರುದ್ಧ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್‌ ಸ್ಪಷ್ಟಪಡಿಸಿದೆ. ಕುಲ್‌ವಿಂದ‌ರ್ ಕೌರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟಿಕರಣ ಬಂದಿದೆ.

ಕೃಷಿ ಕಾಯ್ದೆಯ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದ ವೇಳೆ ಪಂಜಾಬಿನ ಮಹಿಳೆಯರ ಕುರಿತಂತೆ ಕಂಗನಾ ಮಾಡಿದ್ದ ಹೇಳಿಕೆಯಿಂದ ಕುಪಿತಗೊಂಡಿದ್ದ ಕುಲ್‌ವಿಂದ‌ರ್ ಕೌ‌ರ್ ಆಕೆಗೆ ಕಪಾಳಮೋಕ್ಷಗೈದಿದ್ದರೆಂದು ಹೇಳಲಾಗಿದೆ. 

ಈ ಮೊದಲು ಕಾನ್‌ಸ್ಟೆಬಲ್ ಕುಲ್ವಿಂದ‌ರ್ ಕೌ‌ರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರ್ಗಾಯಿಸಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.