KADABA: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಿಂದ ನದಿ ಮಧ್ಯೆ ಬದುಕಿಸಲು ಮೊರೆ- VIDEO

  


ವರದಿ: ಪ್ರಕಾಶ್ ಕೋಡಿಂಬಾಳ

ಕಡಬ; ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ಕುಮಾರಧಾರ ನದಿಗೆ ಆತ್ಮಹತ್ಯೆಗೆ ಹಾರಿದ ವ್ಯಕ್ತಿಯನ್ನು ಪೊಲೀಸರು, ಅಗ್ನಿಶಾಮಕ ದಳ,ಶೌರ್ಯ ತಂಡದ ಸದಸ್ಯರು ಸೇರಿ ರಕ್ಷಣೆ ಮಾಡಿದ ಘಟನೆ ಇಂದು ಬೆಳಗ್ಗೆ ಕಡಬದಲ್ಲಿ ನಡೆದಿದೆ.


ಬೆಂಗಳೂರಿನ ಮಾರ್ತಹಳ್ಳಿಯಲ್ಲಿ ವಾಸವಿರುವ ರವಿಕುಮಾರ್ ಎಂಬಾತ ಕೈ ಕೊಯ್ದುಕೊಂಡು ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದಾತ.ನಂತರದಲ್ಲಿ ಈತ ನದಿಯ ಮದ್ಯ ಭಾಗದ ಪೊದೆಯೊಂದರಲ್ಲಿ ಸಿಲುಕಿಕೊಂಡಿದ್ದು ತನ್ನನ್ನು ರಕ್ಷಣೆ ಮಾಡುವಂತೆ ಅಂಗಲಾಚಿದ್ದಾನೆ.





ಕಿರುಚಾಟ ಕೇಳಿಸಿಕೊಂಡ ಸ್ಧಳೀಯರು ಕಡಬ ಠಾಣಾಧಿಕಾರಿ ಅಭಿನಂದನ್ ಅವರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಪೋಲಿಸರು ಆಗ್ನಿ ಶಾಮಕ ದಳ ಮತ್ತು ಸ್ಥಳೀಯ ಶೌರ್ಯ ತಂಡದಿಂದ ಕಾರ್ಯಾಚರಣೆ ನಡೆಸುವ ಮೂಲಕ ಈತನನ್ನು ರಕ್ಷಣೆ ಮಾಡಿದ್ದಾರೆ. 


ಸ್ಥಳದಲ್ಲಿ ಈತನ

ಬ್ಯಾಗ್ ಮತ್ತು ಪ್ಯಾಂಟಿನ ಪಾಕೇಟ್‌ನಲ್ಲಿ ಹಣ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಯುವಕನನ್ನು ರಕ್ಷಣೆ ಮಾಡಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಪುತ್ತೂರಿಗೆ ಕಳುಹಿಸಲಾಗಿದೆ.



ವ್ಯಕ್ತಿಯ ಮಾಹಿತಿ ಲಭ್ಯವಾಗಿದ್ದು ಮೂಲತ:ಆಂದ್ರ ಪ್ರದೇಶದ ಮಡಕಸಿರ ನಿವಾಸಿ ರವಿ ಕುಮಾರ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಬೆಂಗಳೂರು ಮಾರ್ತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ನದಿಗೆ ಹಾರಲು ಕಾರಣವೇನು?: ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ನಷ್ಟ ಉಂಟಾಗಿತ್ತು.ಹೀಗಾಗಿ ಸುಮಾರು ಎರಡುಲಕ್ಷದಷ್ಟು ಸಾಲ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ.


ಇದರಿಂದ ನೊಂದ ಈತ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದ, ಸೋಮವಾರ ಮುಂಜಾನೆ 5 ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಯಾವುದೋ ಆಯುಧನಿಂದ ತುಂಡರಿಸಿಕೊಂಡು ನದಿಗೆ ಹಾರಿದ್ದಾನೆ ಎಂಬ ವಿಚಾರ ಪೊಲೀಸರಿಗೆ ತಿಳಿಸಿದ್ದಾನೆ. ತುಂಬಿ ಹರಿಯುತ್ತಿದ್ದ ಕುಮಾರಧಾರ ನದಿಗೆ ಹಾರಿದ ಬಳಿಕ ಅದೃಷ್ಟವಶತ್ ಪೊದೆಯೊಂದು ಸಿಕ್ಕಿದ ಕಾರಣ ಅದರಲ್ಲಿ ಸಿಲುಕಿಕೊಂಡಿದ್ದ. ಬಳಿಕ ರಕ್ಷಣೆಗಾಗಿ ಕೂಗಾಡಿದ್ದು ಹೀಗಾಗಿ ಸ್ಥಳೀಯರು ಇಲಾಖೆಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ , ಪೊಲೀಸರು,ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ಮಾಡಿದ್ದಾರೆ.


ಈತನಲ್ಲಿದ್ದ ಮೊಬೈಲ್ ಪೋನ್ ತುಂಬಿ ಹರಿಯುವ ನದಿಯಲ್ಲಿ ನಾಪತ್ತೆಯಾಗಿದೆ.ಈತನ ಪ್ಯಾಂಟ್ ಕಿಸೆಯಲ್ಲಿ ಹತ್ತು ಸಾವಿರ ರೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೈಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ