ಬೆಂಗಳೂರು: ಹೌದು, ಗೂಗಲ್ ಮ್ಯಾಪ್ ನಂಬಿಕೊಂಡು ಹೋದವರು ಕೆಲವು ರಾಜ್ಯಗಳಲ್ಲಿ ಹಳ್ಳಕೆ, ನದಿಗೆ ಹಾಗೂ ಸಮುದ್ರಕ್ಕೆ ಕಾರನ್ನು ಹಾರಿಸಿ ಪೇಚಿಗೆ ಸಿಲುಕಿದ ಘಟನೆಗಳನ್ನು ನೋಡಿದ್ದೇವೆ. ಇನ್ನೂ ಅನೇಕ ಕಡೆಗಳಲ್ಲಿ ಜನರು ಅಪಾಯವನ್ನೂ ತಂದೊಡ್ಡಿಕೊಂಡು ನಡುರಾತ್ರಿ ಎಲ್ಲೆಲ್ಲೋ ಬಾಕಿಯಾದ ಘಟನೆಗಳನ್ನೂ ಗಮನಿಸಿದ್ದೇವೆ. ಆದರೆ ವಾಹನ ಸವಾರರನ್ನು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ ಎಂದರೆ ನೀವು ನಂಬಲೇಬೇಕು.
ಹೌದು, ಗೂಗಲ್ ಮ್ಯಾಪ್‌ನಲ್ಲಿ ಲೊಕೇಶನ್ ಹುಡುಕಿಕೊಂಡು ಹೋಗುವವರಿಗೆ
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ
ಮಾಡುತ್ತದೆ. . ನೀವು ಗೂಗಲ್‌ನಲ್ಲಿ Police itrare... ಎಂದು
ಸರ್ಚ್ ಮಾಡಿದರೆ, ಯಾವ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್
ಇದ್ದಾರೆ ಎಂಬುದನ್ನು ಗೂಗಲ್ ಹೇಳುತ್ತದೆ ಅಂತೆ. ನೀವು ಗೂಗಲ್‌ನಲ್ಲಿ police irtare... ಎಂದು ಸರ್ಚ್ ಮಾಡಿದರೆ, 'ಪೊಲಿಸ್
ಇರ್ತಾರೆ ನೋಡ್ಕೊಂಡ್ ಹೋಗಿ' (Police irtare
nodkond hogi), 'ಪೊಲೀಸ್ ಇರ್ತಾರೆ', 'ಪೊಲೀಸ್
ಇರ್ತಾರೆ ಹುಷಾರು' ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗು ಮಗಾ...
ಎಂದೆಲ್ಲಾ ಎಚ್ಚರಿಕೆ ಸಂದೇಶಗಳನ್ನು ನೀಡುವ ಸ್ಥಳಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
ಬೆಂಗಳೂರಿನಲ್ಲಿ ಮಾವಳ್ಳಿ ಹನುಂತಯ್ಯ ಸರ್ಕಲ್, ಕೂಡ್ಲು
ರಾಮ್‌ದೇವ್ ಮೆಡಿಕಲ್ ಸ್ಟೋರ್, ಕನಕಪುರ
ರಸ್ತೆಯಲ್ಲಿ ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗಿ ಎಂದು ಲೊಕೇಶನ್ ತೋರಿಸಲಾಗುತ್ತದೆ.
ಬೆಂಗಳೂರಿನಲ್ಲಿ ಪ್ರತಿ 100 ಮೀಟರ್‌ಗೊಬ್ಬರಂತೆ
ಟ್ರಾಫಿಕ್ ಪೊಲೀಸರು ಕಾಣಸಿಗುತ್ತಾರೆ. ಅದರಲ್ಲಿಯೂ ಬೆಂಗಳೂರಿನ ಹೊರ ವಲಯದಿಂದ ನಗರದ ಕೇಂದ್ರ
ಭಾಗದತ್ತ ಬರುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಲಹೆ
ನೀಡುತ್ತಿದೆ. ಬೆಂಗಳೂರಿನಲ್ಲಿ ವಾಹನ ಸವಾರರು ಗೂಗಲ್ ಮ್ಯಾಪ್‌ನಲ್ಲಿ police irtare... ಎಂದು ಸರ್ಚ್ ಮಾಡಿದರೆ ಹಲವು ಪ್ರಮುಖ ವೃತ್ತಗಳ ಹೆಸರು ಶೋ ಆಗುತ್ತದೆ.
ಆಗ ಅಲ್ಲಿ Police irtare nodkond hogi... ಎಂದು
ಗೂಗಲ್ ಮ್ಯಾಪ್‌ನಲ್ಲಿ ಸಲಹೆ ನೀಡಲಾಗುತ್ತದೆ. ಇನ್ನು ಗೂಗಲ್ ಮ್ಯಾಪ್‌ನಲ್ಲಿ ಸಂಚಾರಿ ನಿಯಮ
ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ನಿಂತುಕೊಳ್ಳುವ
ಸ್ಥಳಗಳನ್ನು ಗುರುತಿಸಲಾಗಿದೆ. ಇದರಿಂದ ಬೆಂಗಳೂರಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತೋರಿಸುವ ರಸ್ತೆ
ಹಾಗೂ ವೃತ್ತಗಳಲ್ಲಿ ಹಾದು ಹೋಗುವ ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು
ಪಾಲಿಸಿಕೊಂಡು ಹೋಗಬೇಕು. ಒಂದು ವೇಳೆ ಹೆಲ್ಮೆಟ್ ಇಲ್ಲದಿದ್ದೆರೆ ಅಥವಾ ಇನ್ಯಾವಿದೋ ಸಂಚಾರಿ ನಿಯಮ
ಪಾಲಿಸಲು ಸಾಧ್ಯವಾಗದವರಿಗೆ ಟ್ರಾಫಿಕ್ ಪೊಲಿಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್ ಸಹಾಯ
ಮಾಡುತ್ತಿದೆ.
ಸಂಚಾರಿ ಪೊಲೀಸರ ಬಗ್ಗೆ ಗೂಗಲ್‌ನಲ್ಲಿ ಎಚ್ಚರಿಕೆ ಸಂದೇಶ ನೀಡುವುದು
ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿರದೇ ಮೈಸೂರು, ಚಿಕ್ಕಮಗಳೂರು, ದಾವಣಗೆರೆ, ಹಿರಿಯೂರು, ಕೊಟ್ಟಿಗೆಹಾರ-ಚಿಕ್ಕಮಗಳೂರು
ರಸ್ತೆಯಲ್ಲಿ ಕೂಡ ಗೂಗಲ್ ಮ್ಯಾಪ್‌ನಲ್ಲಿ ಪೊಲೀಸ್ ಇರ್ತಾರೆ ನೋಡ್ಕೊಂಡು ಹೋಗಿ ಎಂದು
ಗುರುತಿಸಲಾಗಿದೆ. ಇದರಿಂದ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಮುಂದೆ
ಹೋಗುತ್ತಾರೆ. ಇನ್ನು ಕೆಲವರು ಪೊಲೀಸರು ಇರುವ ಸ್ಥಳದಲ್ಲಿ ಹಾದು ಹೋಗದೇ ಬೇರೊಂದು ರಸ್ತೆಯಲ್ಲಿ
ಹೋಗಲು ಮುಂದಾಗುತ್ತಾರೆ. ಆದರೆ ಈ ರೀತಿ ಸುತ್ತು ಬಳಸಿ ಹೇಗೇಗೋ ಓಡಾಡೋದಕ್ಕಿಂತ ಶಿಸ್ತಾಗಿ ಸಂಚಾರ
ನಿಯಮಗಳನ್ನು ಪಾಲಿಸೋದೇ ಒಳ್ಳೆಯದಲ್ವೇ?!
Social Icons