ಮರಿಯನ್ನೇ ಹಾಕದೆ ಹಾಲು ಕೊಡುತ್ತಿದೆಯಂತೆ ಈ ಮೇಕೆ| ಜನರಲ್ಲಿ ಅಚ್ಚರಿ

ಬೆಳಗಾವಿ: ಪ್ರಪಂಚದಲ್ಲಿ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಅನೇಕ ವಿದ್ಯಾಮಾನಗಳು ನಡೆದಿರುವುದನ್ನು ನಾವು ಗಮನಿಸಿದ್ದೇವೆ. ಏಕಕಾಲದಲ್ಲಿ ಹಸು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ಮೂರು ಕಣ್ಣುಗಳನ್ನು ಮೇಕೆ ಹೊಂದಿರುವುದು ಸೇರಿದಂತೆ ಅನೇಕ ವೈಚಿತ್ರ್ಯಭರಿತ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಇಂತಹುದೇ ಒಂದು ಸುದ್ದಿ ಭಾರೀ ವೈರಲ್ ಆಗಿದೆ. 45 ದಿನಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ಹಾಲು ಕೊಡುತ್ತಿರುವುದು ಆಶ್ಚರ್ಯ ಮೂಡಿಸಿದೆ.



ಈ ವಿದ್ಯಾಮಾನ ಕಂಡುಬಂದಿರುವುದು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸಂಬರಗಿ ಸಮೀಪದ ಕಲ್ಲೊತ್ತಿ ಗ್ರಾಮದಲ್ಲಿ ಗ್ರಾಮದ ನಿವಾಸಿ ಅಣ್ಣಪ್ಪ ಬಾಬು ನಾಯಿಕವಾಡಿ ಎಂಬುವವರಿಗೆ ಸೇರಿದ 45 ದಿನದ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿ ಹಾಕದೇ ಹಾಲು ಕೊಡುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

ಸಾಮಾನ್ಯವಾಗಿ ಮೇಕೆಗಳು ಎರಡು ಮೊಲೆಗಳನ್ನು ಹೊಂದಿರುತ್ತವೆ. ಆದರೆ, ಈ ಮೇಕೆ 4 ಮೊಲೆಗಳನ್ನು ಹೊಂದಿರುವುದು ಮೊತ್ತೊಂದು ವಿಶೇಷವಾಗಿದೆ. ಮೇಕೆ ಮರಿಯು ಹಾಲು ಕೊಡುತ್ತಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಊರಿನವರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.  ಈ ವಿಚಾರ ಭಾರೀ ಚರ್ಚೆಗೂ ಗ್ರಾಸವಾಗಿದೆ.