ಬೆಂಗಳೂರು: ಪಾನಿಪುರಿ ತಯಾರಿಕೆಯಲ್ಲಿ ಮಾನದಂಡಗಳನ್ನು ಸಮರ್ಪಕವಾಗಿ ಅಳವಡಿಸುತ್ತಿಲ್ಲ. ಹೀಗಾಗಿ ಇದು ಕ್ಯಾನ್ಸರ್ ಸಹಿತ ಹಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದೆಂಬ ಅಂಶ ವರದಿಯೊಂದರಲ್ಲಿ ಬಹಿರಂಗವಾಗಿದೆ.
ಪಾನಿಪುರಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ನಾವು ಸ್ಯಾಂಪಲ್ ಪಡೆದು ಪರಿಶೀಲಿಸಿದ್ದು, ಈ ಭಯಾನಕ ಅಂಶ ಬಹಿರಂಗಗೊಂಡಿದೆ ಎಂದು ಆರೋಗ್ಯ ಸುರಕ್ಷಾ ಇಲಾಖೆಯ ಆಯುಕ್ತ ಶ್ರೀನಿವಾಸ ಕೆ. ಹೇಳಿದ್ದಾರೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕರ್ನಾಟಕ ರಾಜ್ಯದ ಬೀದಿ ಬದಿಯ ಅಂಗಡಿ, ಈಟರಿ ಮತ್ತು ರೆಸ್ಟೋರೆಂಟ್ ಗಳಿಂದ 260 ಸ್ಯಾಂಪಲ್ ಗಳನ್ನು ಪಡೆಯಲಾಗಿದ್ದು ಈ ಪೈಕಿ 42ರಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಬಳಸಲಾಗಿದೆ. 18 ಸ್ಯಾಂಪಲ್‌ಗಳು ಮನುಷ್ಯರು ತಿನ್ನುವಂತೆಯೇ ಇರಲಿಲ್ಲ ಎಂದು ವರದಿಯಾಗಿದೆ.
ಒಟ್ಟು ಸ್ಯಾಂಪಲ್ ಗಳ ಪೈಕಿ 22 ಶೇಕಡಾ ಪಾನಿಪುರಿ ತಯಾರಿಕೆಯು ಮಾನದಂಡಗಳನ್ನು ಮೀರಿ ಮಾಡಿದ್ದಾಗಿದ್ದು, ಮನುಷ್ಯರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಪಾನಿಪುರಿ ತಯಾರಿಕೆಯ ಸಂದರ್ಭದಲ್ಲಿ ಬಳಸಲಾಗುವ ಬ್ರಿಲಿಯಂಟ್ ಬ್ಲೂ, ಸನ್‌ಸೆಟ್ ಯೆಲ್ಲೋ, ಟರ್ಟ್ರಾಝಿನ್ ಮೊದಲಾದವುಗಳು ಮಾರಕ ರೋಗಗಳಿಗೆ ಕಾರಣವಾಗಲಿದ್ದು, ಹೊಟ್ಟೆನೋವು, ಹೃದಯಾಘಾತ, ಆಟೋ ಇಮ್ಯೂನ್ ಖಾಯಿಲೆಗಳು, ಮೂತ್ರ ಪಿಂಡದ ಹಾನಿ ಮೊದಲಾದವುಗಳಿಗೆ ಕಾರಣವಾಗಲಿದೆ ಎಂದು ಕ್ಯಾನ್ಸರ್ ಆಸ್ಪತ್ರೆಯ ಡಾ. ವಿಶಾಲ್ ರಾವ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Social Icons