ಮುಂಬೈ: ರೆಜಿನಾ' ಮತ್ತು 'ನೀರ್ ಪರವೈ' ಸಿನಿಮಾಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ತಮಿಳು ನಟಿ ಸುನೈನಾ ದುಬೈ ಯೂಟ್ಯೂಬರ್ ಖಲೀದ್ ಅಲ್ ಅಮೇರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಉಂಗುರಗಳಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದ ತಮ್ಮ ಖಾತೆಯಲ್ಲಿ ಹಂಚಿಕೊಂಡ ಬಳಿಕ ಈ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿವೆ.
ಖಾಲಿದ್ ಅಲ್ ಅಮೇರಿ ಆರು ತಿಂಗಳ ಹಿಂದೆ ತಮ್ಮ ಪತ್ನಿ ಸಲಾಮಾ ಮೊಹಮ್ಮದ್‌ರಿಂದ ವಿಚ್ಛೇದನ ಪಡೆದಿದ್ದರು. ಅವರೀಗ ಸುನೈನಾರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಎರಡು ಕೈಗಳು ಪರಸ್ಪರ ಹಿಡಿದಿರುವ ನಿಗೂಢ ಪೋಸ್ಟ್‌ಗಳನ್ನು ಇಬ್ಬರೂ ಹಾಕಿಕೊಂಡಿದ್ದಾರೆ.
ಜೂನ್ 5ರಂದು ಸುನೈನಾ ಉಂಗುರ ಧರಿಸಿರುವ ಎರಡು ಕೈಗಳನ್ನು ಪರಸ್ಪರ ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಗಾಗಿ ಸುನೈನಾ ಲಾಕ್ ಎಮೋಜಿಯನ್ನು ಸೇರಿಸಿದ್ದಾರೆ. ಆದರೆ, ಆಕೆ ತನ್ನ ಭಾವಿ ಪತಿ ಯಾರೆಂಬುದನ್ನು ಬಹಿರಂಗಪಡಿಸಿಲ್ಲ. ಈ ಮಧ್ಯೆ ಜೂನ್ 26 ರಂದು, ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ (40) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ಫೋಟೊವನ್ನು ಹಂಚಿಕೊಂಡಿದ್ದಾರೆ.
ಸುನೈನಾ ಮತ್ತು ಖಾಲಿದ್ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡ ಚಿತ್ರಗಳನ್ನು ಗಮನಿಸಿ ಅಭಿಮಾನಿಗಳು ಇಬ್ಬರೂ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

Social Icons