ಬೆಂಗಳೂರು: ಕನ್ನಡ ಕಿರುತೆರೆ ಲೋಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಇನ್ನಿಲ್ಲ. ಬೆಂಗಳೂರಿನ ನಾಗರಬಾವಿಯಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿನೋದ್ ಸಾವಿಗೀಡಾಗಿದ್ದಾರೆ.
ಸಿನಿಮಾ ನಿರ್ಮಾಣ ಹಾಗೂ
ಸೀರಿಯಲ್ ನಿರ್ಮಾಣದಲ್ಲಿ ವಿನೋದ್ ದೋಂಡಾಲೆ ತೊಡಗಿಸಿಕೊಂಡಿದ್ದರು. ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿನೋದ್ ಅವರ ಕೆಲಸ
ಕಾಣಬಹುದು. ಕರಿಮಣಿ, ಶಾಂತಂ ಪಾಪಂ ಸೇರಿದಂತೆ ಅನೇಕ
ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದಾರೆ. ನಿನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರ
ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ
ಶುರು ಮಾಡಬೇಕಿತ್ತು. . ನಿರ್ಮಾಣಕ್ಕೆ ಕೈಹಾಕಿದ್ಮೇಲೆ ಆರ್ಥಿಕವಾಗಿ ವಿನೋದ್ ದೋಂಡಾಲೆ
ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಸಾಲದ ಹೊರೆಯಿಂದಾಗಿ ವಿನೋದ್ ದೋಂಡಾಳೆ ಆತ್ಮಹತ್ಯೆಗೆ
ಶರಣಾಗಿದ್ದಾರೆ ಎನ್ನಲಾಗಿದೆ.
ವಿನೋದ್ ದೋಂಡಾಲೆ ನಿಧನವಾರ್ತೆ ಕೇಳಿ ಟಿ ಎನ್ ಸೀತಾರಾಮ್ ಆಘಾತಗೊಂಡಿದ್ದಾರೆ. ವಿನೋದ್ ದೋಂಡಾಲೆ ಬಗ್ಗೆ ಫೇಸ್‌ಬುಕ್‌ನಲ್ಲಿ ಟಿ ಎನ್ ಸೀತಾರಾಮ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.‘’ನನ್ನ ತಂಡದಲ್ಲಿ ಅನೇಕ ವರ್ಷಗಳ ಕಾಲ ನಿರ್ದೇಶನದ ವಿಭಾಗದಲ್ಲಿ ಇದ್ದ, ಅತ್ಯಂತ ಪ್ರತಿಭಾವಂತ, ಸೌಜನ್ಯದ ಗಣಿ, ವಿನೋದ ಧೋಂಡಾಲೆ ಇನ್ನಿಲ್ಲ. ಅವರ ಎರಡು ಧಾರಾವಾಹಿಗಳು ‘ಕರಿಮಣಿ’, ‘ಗಂಗೆ ಗೌರಿ’ ತುಂಬಾ ಜನಪ್ರಿಯವಾಗಿ ನಡೆಯುತ್ತಿದ್ದವು. ಇನ್ನೊಂದು ಚಿತ್ರ ಅರ್ಧದಷ್ಟು ಮುಗಿದಿದೆ. ’ನನ್ನ ‘ಮಗಳು ಜಾನಕಿ’ಯ ಮೊದಲ ಐದು ಎಪಿಸೋಡಿನ ತಾಂತ್ರಿಕ ನಿರ್ದೇಶನ ಮಾಡಿದ್ದರು. ಮುಕ್ತ, ಮುಕ್ತ ಮುಕ್ತ ಧಾರಾವಾಹಿಗಳಿಗೆ ಅವನೇ ಎಪಿಸೋಡ್ ನಿರ್ದೇಶಕ. ಅವನು ಷಾಟ್‌ಗಳನ್ನು ವಿನ್ಯಾಸ ಮಾಡುತ್ತಿದ್ದ ಬಗೆಯೇ ಅನನ್ಯ. ’ಮರ್ಯಾದೆಗೆ ಅಂಜುವ ಮನುಷ್ಯ. ಯಾರಿಗೂ ಎಂದಿಗೂ ಜೋರಾಗಿ, ಕೋಪದಿಂದ ಮಾತನಾಡಿದ್ದು ನಾನು ಕಂಡಿಲ್ಲ. ಎಂದೂ ಗಾಸಿಪ್ ಮಾಡುವ ಜಾಯಮಾನ ಇರಲೇ ಇಲ್ಲ. ಒತ್ತಡ ಮಾಡಿಕೊಳ್ಳಬಾರದೆಂದು ನನಗೆ ಅನೇಕ ಬಾರಿ ಸಮಾಧಾನ ಹೇಳಿದ್ದ ಮನುಷ್ಯ ಇಂದು ಬಹುಶಃ ಒತ್ತಡ ತಡೆಯಲಾರದೆ ಬದುಕು ಮುಗಿಸಿಕೊಂಡುಬಿಟ್ಟ. ಚಿಕ್ಕ ವಯಸ್ಸು. ಬದುಕಿಗೊಂದು ತರ್ಕವೇ ಬೇಡವೆ.. ತೀರಾ ಸಂಕಟವಾಗುತ್ತದೆ. ಅಂತಿಮ ನಮನಗಳು ವಿನು..’’ ಎಂದು ಟಿ.ಎನ್. ಸೀತಾರಾಮ್ ಬರೆದುಕೊಂಡಿದ್ದಾರೆ

Social Icons