ಖ್ಯಾತ ನಿರ್ದೇಶಕ ತರುಣ್ ಸುಧೀರ್ ರನ್ನು ವರಿಸುತ್ತಿದ್ದಾರೆ ಕರಾವಳಿ ಕುವರಿ ಸೋನಲ್ ಮೊಂತೇರೋ| ಮದ್ವೆ Date ಕೂಡ ಫಿಕ್ಸ್..!!

ಬೆಂಗಳೂರು: ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಕರಾವಳಿ ಬೆಡಗಿ ಸೋನಲ್ ಮೊಂತೇರೋ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಸ್ಟೈಲ್‌ನಲ್ಲಿಯೇ ಸಿನಿಮಾ ಥಿಯೇಟರ್‌ನಲ್ಲಿಯೇ ತನ್ನ ಪ್ರೇಯಸಿ ಹಾಗೂ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಜೊತೆಗೆ ಮದುವೆ ದಿನಾಂಕವನ್ನೂ ಅನೌನ್ಸ್ ಮಾಡಿದ್ದಾರೆ.



ಹೌದು, ಕಳೆದೊಂದು ತಿಂಗಳಿನಿಂದಲೂ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ, ಈ ಬಗ್ಗೆ 15 ದಿನಗಳು ಕಳೆದರೂ ಯಾರೊಬ್ಬರೂ ಬಹಿರಂಗವಾಗಿ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಕೆಲವು ದಿನಗಳ ಹಿಂದೆ ಸೋನಲ್ ತರುಣ್ ಅವರನ್ನು ವರಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ನಿರ್ದೇಶಕ ತರುಣ್ ಸುಧೀರ್ ಮಾತ್ರ ಯಾವುದೇ ಸುಳಿವನ್ನೂ ನೀಡದೇ ಜು.27ರಂದು ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಅದೇ ರೀತಿ ಜು.22ರ ಸೋಮವಾರ ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ಮಾದರಿಯಲ್ಲಿಯೇ ನಟಿ ಸೋನಲ್ ಮೊಂಥೆರೋ ಅವರನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ನಿರ್ದೇಶಕ ತರುಣ್ ಸುಧೀರ್ ಅವರ ಆಪ್ತ ಸ್ನೇಹಿತ ನಟ ದರ್ಶನ್ ಸ್ವತಃ ತರುಣ್ ಮತ್ತು ಸೋನಲ್ ಅವರ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ, ನಟ ದರ್ಶನ್ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದ ತರುಣ್ ಇತ್ತೀಚೆಗೆ ನಟ ದರ್ಶನ್ ಭೇಟಿ ಮಾಡಲು ಜೈಲಿಗೆ ಹೋಗಿ ಬಂದಿದ್ದರು. ಈ ವೇಳೆ ನಟ ದರ್ಶನ್ ನನಗಾಗಿ ನೀನು ನಿನ್ನ ಮದುವೆ ದಿನಾಂಕ ಮುಂದೂಡಿಕೆ ಮಾಡಿಕೊಳ್ಳಬೇಡ. ಅದೇ ದಿನಾಂಕದಲ್ಲಿ ನೀನು ಮದುವೆ ಮಾಡಿಕೋ, ನಾನು ಅಷ್ಟರೊಳಗೆ ಜೈನಿಂದ ಹೊರಗೆ ಬರುವುದಾಗಿ ಭರವಸೆ ನೀಡಿದ್ದಾರಂತೆ. ಹೀಗಾಗಿ, ಸಿನಿಮಾ ಮಂದಿರದಲ್ಲಿ ತಮ್ಮ ಮದುವೆ ದಿನಾಂಕ ಆ.11ರಂದು ಎಂದು ಘೋಷಣೆ ಮಾಡಿದ್ದಾರೆ. ಆ.9ರಿಂದ ಆ.11ರವರೆಗೆ ಮದುವೆ ಶಾಸ್ತ್ರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ತರುಣ್ ಸುಧೀರ್ ಅವರು ನಟಿ ಸೋನಲ್ ಅವರನ್ನು ನೋಡಿ ಇಷ್ಟಪಟ್ಟಿದ್ದಾರೆ. ಆದರೆ, ಪ್ರೀತಿ ಹೇಳಿಕೊಳ್ಳಲು ಒದ್ದಾಡುತ್ತಿರುವಾಗ ನಟ ದರ್ಶನ್ ಇವರ ಪ್ರೀತಿಗೆ ಸಹಾಯ ಮಾಡಿದ್ದಾರೆ. ಜೊತೆಗೆ, ಮದುವೆಯ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದಕ್ಕೆ ನಟಿ ಸೋನಲ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಜೋಡಿ ಆಗಿರುವ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿಯಾಗಿದೆ.