ವರದಿ: ಹರೀಶ್ ಮಾಂಬಾಡಿ
ಬಂಟ್ವಾಳ: ಬೈಕ್ ಅಪಘಾತದಿಂದ 2024 ಫೆ.14ರಂದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನರಿಕೊಂಬು ಗ್ರಾಮ ಅಂತರ ನಿವಾಸಿ ಧರ್ಣಪ್ಪ ಕುಲಾಲ್ (74) ಜೂ.30ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇಲ್ಲದ ಕಾರಣ ತಿಂಗಳ ಹಿಂದೆ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಹೊಂದಿದ್ದರು. ಭಜನಾ ಸಂಕೀರ್ತನೆಕಾರರಾಗಿ ಗುರುತಿಸಿಕೊಂಡಿದ್ದ ಅವರು, ನರಿಕೊಂಬು ಅಂತರ ಶ್ರೀ ಕೋದಂಡರಾಮ ಭಜನಾ ಮಂದಿರ (ರಿ) ರಾಮನಗರ ಇದರ ಸಂಸ್ಥಾಪಕರಾಗಿದ್ದರು. ಅಂತರ ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನದ ನಿತ್ಯ ಚಾಕರಿದಾರರಾಗಿ, ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Social Icons