ಕಟೀಲು ದೇಗುಲಕ್ಕೆ BollyWood ನಿರ್ಮಾಪಕಿ ಭೇಟಿ

 



ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಬಾಲಿವುಡ್ ನಿರ್ಮಾಪಕಿ ಬಾಲಾಜಿ ಟೆಲಿಪಿಲ್ಮ್ ನ ಮಾಲಕಿ ಪದ್ಮಶ್ರೀ ಪುರಸ್ಕ್ರತ ಎಕ್ತಾಕಪೂರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. 


ದೇವಳದ ವತಿಯಿಂದ ಕಮಲಾದೇವಿಪ್ರಸಾದ್ ಆಸ್ರಣ್ಣ ದೇವರ ಶೇಷ ವಸ್ರ್ತ ನೀಡಿ ಗೌರವಿಸಿದರು. 

ನಂತರ ಅವರು ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ  ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಿಬರೂರಿನ ತೀರ್ಥ ಮತ್ತು ತೀರ್ಥ ಬಾವಿಯ ಬಗ್ಗೆ ಶಿಬರೂರು ಉಮೇಶ್  ಗುತ್ತಿನಾರ್ ಮಾಹಿತಿ ನೀಡಿದರು. ಈ ಸಂದರ್ಭ ರವಿ ಕೋಟ್ಯಾನ್ ಶಿಬರೂರು, ಏಕ್ತಾ ಕಪೂರು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.