'Bigg Boss Kannada Season 11'ಗೆ ನಡೆಯುತ್ತಿದೆ ಸಿದ್ಧತೆ| ಶೋ ಯಾವಾಗ ಆರಂಭ?

ಬೆಂಗಳೂರು: ಬಿಗ್ ಬಾಸ್. ಕನ್ನಡ ರಿಯಾಲಿಟಿ ಶೋಗಳ ಪೈಕಿ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿರುವ ರಿಯಾಲಿಟಿ ಶೋ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಈಗಾಗಲೇ ಯಶಸ್ವಿಯಾಗಿ 10 ಸೀಸನ್ ಗಳನ್ನು ಕಂಡಿದೆ. ಈಗ ಬಿಗ್ ಬಾಸ್ ಕನ್ನಡ ಸೀಸನ್ 11’ ಶುರುವಾಗುವ ಸಮಯ ಹತ್ತಿರ ಬಂದಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.



ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಅಕ್ಟೋಬರ್‌ನಿಂದ ಟಿವಿಯಲ್ಲಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಹಾಗೆಯೇ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ. ಈಗಾಗಲೇ ವಾಹಿನಿಯು ಇದಕ್ಕೆ ಸಂಬಂಧಪಟ್ಟಂತೆ ತಯಾರಿಯನ್ನು ಶುರು ಮಾಡಿದೆ ಎನ್ನುವ ಮಾಹಿತಿ ಲಭಿಸಿದೆ.

ಪ್ರತೀ ಬಾರಿ ವಿಭಿನ್ನವಾಗಿ ಸ್ಪರ್ಧಿಗಳನ್ನು ಹುಡುಕಿ ಮನೆಗೆ ಕಳಿಸೋದು ಬಿಗ್ ಬಾಸ್ ರಿಯಾಲಿಟಿ ಶೋನ ವಿಶೇಷತೆ. ಈ ಬಾರಿ ಕೂಡ ಅಂತಹ ಹಲವು ಪ್ರತಿಭೆಗಳಿರಬಹುದು ಎನ್ನುವ ನಿರೀಕ್ಷೆ ಮೂಡಿದೆ. ಇನ್ನು ಅಂದಾಜಿನ ಪ್ರಕಾರ  ಈ ಬಾರಿ  ಬೃಂದಾವನಧಾರಾವಾಹಿ ನಟ ವರುಣ್ ಆರಾಧ್ಯ, ಯುಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್, ‘ತುಕಾಲಿ ಸ್ಟಾರ್ಸಂತು ಪತ್ನಿ ಮಾನಸಾ, ‘ಮಜಾಭಾರತಖ್ಯಾತಿಯ ರಾಘವೇಂದ್ರ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಒಂದಷ್ಟು ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.  

ಬಿಗ್ ಬಾಸ್ಮನೆಗೆ ಹೋಗುವವರು ಯಾರೂ ಕೂಡ ತಾವು ದೊಡ್ಮನೆಗೆ ಹೋಗ್ತೀವಿ ಅಂತ ಹೇಳೋದಿಲ್ಲ. ಎಲ್ಲವನ್ನೂ ಕೊನೆಯ ಕ್ಷಣದವರೆಗೆ ಗೌಪ್ಯವಾಗಿಟ್ಟಿರಲಾಗುತ್ತದೆ. ಹೀಗಾಗಿ ಯಾರೆಲ್ಲಾ ಫೈನಲ್ ಆಗಿ ಹೋಗ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಒಂದಷ್ಟು ಸಮಯ ಕಾಯಲೇಬೇಕಿದೆ.