ಬೀದರ್: ಇದು ಅಚ್ಚರಿಯಾದರೂ ಸತ್ಯವಾದ ಘಟನೆ. ಹಿಂದಿನ ದಿನ ಮೃತಪಟ್ಟ ಮಗುವಿನ ಅಂತ್ಯಸಂಸ್ಕಾರ ಮಾಡಲಾಗಿದ್ದ ಮೃತದೇಹ ಮರುದಿನ ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯಕ್ಷವಾಗಿದೆ. ಬೀದರ್ ನಲ್ಲಿ ನಡೆದ ಘಟನೆ ನಾನಾ ಆಯಾಮಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಮಗುವಿನ
ಮೃತದೇಹವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮರಕ್ಕೆ ಜೋಳಿಗೆಯಲ್ಲಿ ನೇತು
ಹಾಕಲಾಗಿತ್ತು. ಮಾಟ ಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಮರಕ್ಕೆ ಕಟ್ಟಿದ್ದ ಮಗುವಿನ ಮೃತದೇಹವನ್ನು ಮತ್ತೆ ಅದೇ ಸ್ಥಳದಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ
ಮಾಡಿದ್ದಾರೆ.ಇನ್ನು ಘಟನೆಯ ಬಗ್ಗೆ ಬೀದರ್ ಪೊಲೀಸರಿಗೆ ಕೂಡ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Social Icons