ಬಂಟ್ವಾಳ: ಲಾರಿಯೊಂದರಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ಶಾಕ್ ನಿಂದ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ಮೃತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕೆಮ್ಮನ್ ಕಾಡಬೆಟ್ಟು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಶಾಮಿಯಾನ ಸಾಮಗ್ರಿಗಳಾದ ತಗಡು
ಶೀಟ್ ಗಳನ್ನು ಲಾರಿಯಿಂದಿ ಇಳಿಸುವ ವೇಳೆ ಮೇಲೆ ವಿದ್ಯುತ್ ಹೈಟೆನ್ಶನ್ ವಯರ್ ಇದ್ದು, ಈ ಸಂದರ್ಭ ಶೀಟ್
ಅದಕ್ಕೆ ತಾಗಿ, ವಿದ್ಯುತ್ ಪ್ರವಹಿಸಿ, ಅದನ್ನು ಎತ್ತುತ್ತಿದ್ದ ಕಾರ್ಮಿಕರಿಗೆ ತಗಲಿ ಈ ಘಟನೆ
ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ಕಡೇಶಿವಾಲಯ ಗ್ರಾಮದ ಕಾಡಬೆಟ್ಟು
ಎಂಬಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಐವರು ಶಾಮಿಯಾನ ಕೆಲಸಗಾರರು ಅಲ್ಲಿಗೆ ಬಂದಿದ್ದರು. ಈ
ಸಂದರ್ಭ ವಿದ್ಯುತ್ ತಂತಿ ತಗುಲಿ ಕುಂದನ್ ಕುಮಾರ್ (20) ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು,
ಬಾಕಿ 4 ಜನ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ಕುಂದನ್ ಕುಮಾರ್ ಮೂಲತ ಬಿಹಾರ ರಾಜ್ಯದ ನಿವಾಸಿಯಾಗಿರುತ್ತಾರೆ. 4 ಜನ ಗಾಯಾಳುಗಳ ಪೈಕಿ ಎರಡು
ಜನ ಜಾರ್ಖಂಡ್, ಒಬ್ಬರು ಪಶ್ಚಿಮ ಬಂಗಾಳ ಹಾಗೂ ಇನ್ನೊಬ್ಬರು ಕಡೇಶಿವಾಲಯ ಗ್ರಾಮದ ಸ್ಥಳಿಯ ನಿವಾಸಿಯಾಗಿರುತ್ತಾರೆ.

Social Icons