ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಳೆ ಮುಂದುವರಿದಿದ್ದು, ಹಲವೆಡೆ ಹಾನಿಗಳು ಸಂಭವಿಸಿವೆ. ನೇತ್ರಾವತಿ ನದಿ ಬೆಳಗ್ಗೆ 6.6 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದರೆ, ಸಂಜೆ 6.4 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಆದರೆ ಅಪಾಯವಿಲ್ಲ. ಕಾರಣ, ಅಪಾಯದ ಮಟ್ಟ 8.5 ಮೀಟರ್ ಆಗಿದೆ.
ಪುದು ಗ್ರಾಮಾದ ಸುಜಿರು ಎಂಬಲ್ಲಿ ಸುಶೀಲ ನಾಗೇಶ ರವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದಿದೆ. ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಯೋಗಿನಿ ಶ್ರೀಧರ ರವರ ಮನೆ ಭಾಗಶ: ಹಾನಿಯಾಗಿರುತ್ತದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಪ್ರಮೀಳಾ ಸುರೇಂದ್ರ ಶೆಟ್ಟಿಯವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ.

Social Icons