August ತಿಂಗಳಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ಗಳು ಬಂದ್..!! ಇಲ್ಲಿದೆ ನೋಡಿ ರಜಾದಿನದ ಲಿಸ್ಟ್

ಬೆಂಗಳೂರು: ನಮ್ಮಲ್ಲಿ ಬ್ಯಾಂಕ್ ಗಳ ಸೇವೆಯ ಬಗ್ಗೆ ಬಹಳಷ್ಟು ಅಭಿಪ್ರಾಯಗಳಿವೆ. ಸಾಲು ಸಾಲು ರಜೆಗಳು ಬ್ಯಾಂಕ್ ಗಳಿಗೆ ಇದ್ದರೆ ಬಹುತೇಕ ಗ್ರಾಹಕರು ಸಮಸ್ಯೆ ಅನುಭವಿಸುತ್ತಾರೆ. ಹೀಗಾಗಿ ಬ್ಯಾಂಕಿಂಗ್ ಕೆಲಸ ಇರುವವರು ಈ ರಜೆಯ ದಿನಗಳನ್ನು ನೋಡಿಕೊಂಡು ವ್ಯವಹರಿಸುವುದು ಸೂಕ್ತ. ಹಾಗಾಗಿ ಬ್ಯಾಂಕ್‌ ರಜಾದಿನಗಳ ಬಗ್ಗೆ ತಿಳಿದುಕೊಂಡಿರಬೇಕು. ಭಾನುವಾರದ ಜೊತೆಗೆ ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಈ ರಜೆಗಳನ್ನು ಹೊರತುಪಡಿಸಿಯೂ ಹಲವು ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿರಲಿವೆ.



ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಹಬ್ಬಗಳು ಬರುತ್ತವೆ. ರಕ್ಷಾ ಬಂಧನ, ಜನ್ಮಾಷ್ಠಮಿ ಮತ್ತು ಸ್ವತಂತ್ರ ದಿನಾಚರಣೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮೂರು ಹಬ್ಬಗಳ ಜೊತೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ಸೇರಿಸಿದ್ರೆ 10 ರಜೆ ಆಗುತ್ತದೆ. ಇನ್ನುಳಿದ ನಾಲ್ಕು ರಜೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಆಗಸ್ಟ್ 2024 ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

ಆಗಸ್ಟ್ 3: ಅಗರ್ತಲಾದಲ್ಲಿ ಕೇರ ಪೂಜೆ ಹಿನ್ನೆಲೆ ಈ ಭಾಗದ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಆಗಸ್ಟ್ 4: ಭಾನುವಾರ

ಆಗಸ್ಟ್ 7: ಹರಿಯಾಲಿ ತೀಜ್ ಹಬ್ಬದ ಹಿನ್ನೆಲೆ ಹರಿಯಾಣದ ಬ್ಯಾಂಕ್‌ಗಳಿಗೆ ರಜೆ

ಆಗಸ್ಟ್ 8: ಈ ದಿನದಂದು ಸಿಕ್ಕಿಂನಲ್ಲಿ ತೇದೋಂಗ್ ಲೋರಂ ಫೈಟ್ ಆಚರಿಸಲಾಗುತ್ತದೆ. ಈ ಹಿನ್ನೆಲೆ ಸಿಕ್ಕಿಂನಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ.

ಆಗಸ್ಟ್ 10: ತಿಂಗಳ ಎರಡನೇ ಶನಿವಾರ

ಆಗಸ್ಟ್ 11: ಭಾನುವಾರ

ಆಗಸ್ಟ್ 13: ಇಂಫಾಲ್‌ನಲ್ಲಿ ದೇಶಭಕ್ತ ದಿನ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 18: ಭಾನುವಾರ

ಆಗಸ್ಟ್ 20: ಶ್ರೀ ನಾರಾಯಣ ಗುರು ಜಯಂತಿ ಹಿನ್ನೆಲೆ ಕೊಚ್ಚಿ ಮತ್ತು ತಿರುವನಂತಪುರದಲ್ಲಿ ರಜೆ ಘೋಷಣೆ ಮಾಡಲಾಗುತ್ತದೆ.

ಆಗಸ್ಟ್ 24: ನಾಲ್ಕನೇ ಶನಿವಾರ

ಆಗಸ್ಟ್ 25: ಭಾನುವಾರ

ಆಗಸ್ಟ್ 24: ಇಡೀ ದೇಶದ ತುಂಬೆಲ್ಲಾ ಕೃಷ್ಣ ಜನ್ಮಷ್ಠಾಮಿಯನ್ನು ಆಚರಣೆ ಮಾಡಲಾಗುತ್ತದೆ. ಹಾಗಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಸರ್ಕಾರಿ ರಜೆ ಇರುತ್ತದೆ.

ಈ ರಜೆಗಳ ದಿನಗಳಂದು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಆನ್‌ಲೈನ್‌ ಮೂಲಕ ಮಾಡಿಕೊಳ್ಳಬಹುದು. ಬ್ಯಾಂಕ್ ರಜೆಯಲ್ಲಿದ್ದರೂ ಎಟಿಎಂ ಸೇವೆ ಗ್ರಾಹಕರಿಗೆ ತೆರೆದಿರುತ್ತದೆ. ಡೆಬಿಟ್ ಕಾರ್ಡ್ ಸಹಾಯದಿಂದ ಎಟಿಎಂ ಮೂಲಕ ಹಣ ಹಿಂಪಡೆದುಕೊಳ್ಳಬಹುದಾಗಿದೆ. ಹಣ ಜಮೆ ಮಾಡುವ ಸೌಲಭ್ಯವೂ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಬ್ಯಾಂಕಿಂಗ್ ಒಕ್ಕೂಟ ತಿಳಿಸಿದೆ.