ಮಂಗಳೂರು: ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಎಸ್‌ಐ ಉಮೇಶ್ ರವರಿಗೆ ಬೀಳ್ಕೊಡುಗೆ ಸಮಾರಂಭ ಸುರತ್ಕಲ್ ನಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿದ ಉಮೇಶ್ ಅವರು ಮಾತನಾಡಿ ಇಲಾಖೆಗೆ ಬರಬೇಕಾದರೆ ಹಿಂದಿನ ದಿನದಲ್ಲಿ ಬಹಳ ಕಷ್ಟವಿತ್ತು. ನನ್ನ ಅಣ್ನನ ಸಹಕಾರದಿಂದ ನನಗೆ ಇಲಾಖೆಗೆ ಸೇರ್ಪಡೆಯಾಗಲು ಸಾದ್ಯವಾಯಿತು. ಕೆಲ ವರ್ಷಗಳ ಹಿಂದೆ ಮಾನಸಿಕವಾಗಿ ನಾನು ನೊಂದಿದ್ದರೂ, ನನ್ನ ಮೇಲಾಧಿಕಾರಗಳು, ನನ್ನ ಅತ್ಮೀಯರು ಧೈರ್ಯ ತುಂಬಿದ ಕಾರಣ ಸೇವೆಯಲ್ಲಿ ಮುಂದುವರಿದೆ. ಇದೀಗ ನನ್ನ ಸ್ವ ಇಚ್ಚೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೀಪಕ್ ವಹಿಸಿ ಮಾತನಾಡಿ ಪ್ರಾಮಾಣಿಕತೆ ಹಾಗೂ ಉತ್ತಮ ಕರ್ತವ್ಯದ ಮೂಲಕ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನಿಷ್ಠಾವಂತರಾದರೆ ಜನ ಗುರುತಿಸುತ್ತಾರೆ ಎಂದರು.
ಈ ಸಂದರ್ಭ ಕಿನ್ನಿಗೋಳಿ ಬಸ್ಸು ಮಾಲಕ ಸಂಘದ ವತಿಯಿಂದ ಉಮೇಶ್ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಪೊಲೀಸ ನಿರೀಕ್ಷಕ ಶರೀಫ್ , ಎಸ್ ಐ ಸುಂದರ್ ರಾಜ್, ಪಿಎಸ್‌ಐ ಆನಂದ್, ಎಎಸ್‌ಐ ರವೀಂದ್ರ ಕೆ, ಎಎಸ್‌ಐ ಕಾಂತಪ್ಪ,ರಾಜು,ಸುಧೀರ್ ಹಾಗೂ ಕರ್ತವ್ಯದಿಂದ ನಿವೃತ್ತರಾಗುತ್ತಿರುವ ಎ ಎಸ್ ಐ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವತಿಯಿಂದ ಸೇವೆಯಿಂದ ನಿವೃತ್ತರಾಗುತ್ತಿರುವ ಎ ಎಸ್ ಐ ಉಮೇಶ್ ರವರನ್ನು ಸನ್ಮಾನಿಸಲಾಯಿತು ಹಾಗೂ ಪದೋನ್ನತಿ ಹೊಂದಿ ವರ್ಗಾವಣೆಗೊಳ್ಳುತ್ತಿರುವ ರವೀಂದ್ರ ಕೆ ರವರನ್ನು ಗೌರವಿಸಲಾಯಿತು. ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.

Social Icons