ನವದೆಹಲಿ: ದೇಶದ ಸೈನ್ಯ ಸೇರಬೇಕು, ದೇಶಸೇವೆ ಮಾಡಬೇಕೆನ್ನುವುದು ಬಹುತೇಕ ಯುವಜನತೆಯ ಕನಸು. ಆದರೆ ಅದನ್ನು ಬೆನ್ನಟ್ಟುವುದು ಅಷ್ಟೊಂದು ಸುಲಭವಲ್ಲ. ಯಾಕೆ ಎನ್ನುವುದಕ್ಕೆ ಈ ವರದಿಯನ್ನು ನೀವು ಓದಲೇಬೇಕು. ಅನುಕ್ಷಣವೂ ದೇಶದ ಬಗ್ಗೆ ಯೋಚಿಸುವ, ದೇಶಕ್ಕಾಗಿ ದುಡಿಯುವ ಈ ವೀರ ಸೈನಿಕರ ತರಬೇತಿಯ ಕ್ಷಣವೂ ಅಷ್ಟೇ ಕಠಿಣವಾಗಿರುತ್ತದೆ. ಎದುರಾಗಬಲ್ಲ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸಲು ಇವರು ತಮ್ಮನ್ನು ತಾವು ಹುರಿಗೊಳಿಸುವ ಪರಿ ಅದ್ಭುತ. ಅದಕ್ಕೆ ಹೇಗೆ ಸೈನಿಕರನ್ನು ಸಜ್ಜುಗೊಳಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿ ಈ ವೀಡಿಯೋ.
ಸೈನಿಕರ ತಾಳ್ಮೆಯನ್ನು
ಪರೀಕ್ಷಿಸುವ ಈ ಕ್ಲಿಪ್ ಈಗ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಸಾಕಷ್ಟು ವೀಕ್ಷಣೆ ಗಳಿಸಿದೆ.
ಜೊತೆಗೆ ಯೋಧರ ಸೇವೆ, ದೇಶಕ್ಕಾಗಿ ಕಠಿಣ
ತರಬೇತಿ ಪಡೆಯುವುದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನಿಜಕ್ಕೂ ಇಂತಹ ಕಠಿಣ
ತರಬೇತಿಗಳನ್ನು ಮುಗಿಸಿ ಸೈನಿಕರಾಗುವವರಿಗೆ ನಾವು ಕೂಡ ಒಂದು ಸೆಲ್ಯೂಟ್ ಹೊಡೆಯಲೇಬೇಕು ಅಲ್ಲವೇ?!!
Social Icons