ಅನಂತ್ ಅಂಬಾನಿ ಮದುವೆಗೆ ಕಿಚ್ಚ ಸುದೀಪ್ ಯಾಕೆ ಹೋಗಿಲ್ಲ ಗೊತ್ತೇ?!| Ananth Ambani Wedding

ಬೆಂಗಳೂರು: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದ ಸಂಭ್ರಮ ಇನ್ನೂ ಮುಗಿದಿಲ್ಲ. ಈ ಮದುವೆಗೆ ರಾಜಕೀಯ, ಸಿನಿಮಾ, ಸಂಗೀತ, ನೃತ್ಯ, ಉದ್ಯಮ, ಕ್ರಿಕೆಟ್ ಹಾಗೂ ಕ್ರೀಡೆಗಳು ಸೇರಿದಂತೆ ಎಲ್ಲ ವಿಭಾಗದ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಕನ್ನಡದ ರಿಷಭ್ ಶೆಟ್ಟಿ ಅವರು ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಹೋಗಿ ಬಂದಿದ್ದರು. ಆದರೆ, ಮದುವೆ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಬಿಟ್ಟರೆ ಬೇರಾರೂ ಹೋಗಿರಲಿಲ್ಲ. ಆದರೆ ಸ್ಟಾರ್ ನಟರಾದ ಸುದೀಪ್ ಅವರ ಭಾಗವಹಿಸುವಿಕೆ ಕಂಡುಬಂದಿರಲಿಲ್ಲ. ಇದೀಗ ಆ ಮದುವೆಗೆ ಸುದೀಪ್ ಯಾಕೆ ಹೋಗಿರಲಿಲ್ಲ ಎನ್ನುವ ಕಾರಣ ಬಹಿರಂಗಗೊಂಡಿದೆ.



ಮದುವೆಗೆ ನನಗೆ ಆಹ್ವಾನ ಕೊಟ್ಟಿದ್ದರು. ಆದರೆ, ನನಗೆ ಅಲ್ಲಿನ ಪ್ರೊಟೊಕಾಲ್ ಅಡ್ಡಿಯಾಗಬಹುದು ಎಂದು ಮದುವೆಗೆ ಹೋಗಾಲಗಲಿಲ್ಲ ಎಂದು ಸ್ಯಾಂಡಲ್‌ವುಡ್ ಬಾದ್‌ಶಾ ಖ್ಯಾತಿಯ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಖಂಡಿತವಾಗಿಯೂ ನನಗೆ ಅನಂತ್ ಅಂಬಾನಿ ಮದುವೆಗೆ ಆಹ್ವಾನ ಬಂದಿತ್ತು. ಅವರು ನನ್ನನ್ನು ಗುರುತಿಸಿ ಅಹ್ವಾನ ನೀಡಿದ್ದಕ್ಕೆ ಖಂಡಿತವಾಗಿಯೂ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಮದುವೆ ಹಿಂದಿನ ದಿನ ಹಾಗೂ ಮೊದಲ ದಿನದ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತೆ ಅಂಬಾನಿ ಅವರ ಕಚೇರಿಗಳಿಂದಲೂ ಕರೆ ಬಂದಿತ್ತು. ನಾನು ಕೂಡ ಮದುವೆಗೆ ಬರುತ್ತೇನೆ ಎಂದು ಹೇಳಿದ್ದೆನು. ಆದರೆ, ನನಗೆ ಮದುವೆಗೆ ಹೋಗಬೇಕೆಂಬ ಸಿದ್ಧತೆಯಲ್ಲಿದ್ದಾಗ ನನಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೋಗಲಾಗಲಿಲ್ಲ ಎಂದು ಹೇಳಿದರು.

ಅಂಬಾನಿ ಪುತ್ರನ ಮದುವೆಗೆ ಹೋಗುವುದಕ್ಕೆ ತುಂಬಾ ಕಠಿಣ ಪ್ರೋಟೋಕಾಲ್ ಇದೆ. ಮದುವೆಗೆ ಆಹ್ವಾನವಿದ್ದವರಿಗೆ ಸ್ವಲ್ಪ ಅನಾರೋಗ್ಯವಿದ್ದರೆ, ನೆಗಡಿ, ಶೀತ ಅಥವಾ ಜ್ವರ ಇದ್ದರೆ ಆರ್‌ಟಿಪಿಸಿಆರ್ ಚೆಕಿಂಗ್ ಕೂಡ ಮಾಡಲಾಗುತ್ತಿತ್ತು. ಆದರೆ, ನನಗೆ ಸ್ವಲ್ಪ ಹುಷಾರಿರಲಿಲ್ಲ, ಸ್ವಲ್ಪ ಜ್ವರೂ ಇತ್ತು. ಇದರಿಂದ ನಾನು ಅಲ್ಲಿಗೆ ಹೋಗಲು ಕಂಫರ್ಟ್‌ ಇರಲಿಲ್ಲ. ಜೊತೆಗೆ, ನನಗೆ ಇಲ್ಲಿ ಹಲವು ಕೆಲಸಗಳು ಕೂಡ ಇದ್ದವು. ಇನ್ನು ಅಲ್ಲಿಗೆ ಹೋದ ನಂತರ ನಮಗೆ ಟೆಂಪರೇಚರ್ ಚೆಕ್ ಮಾಡಿ ನಿಮಗೆ ಒಳಗೆ ಬಿಡಬೇಡಿ ಇಲ್ಲ ಎಂದು ಹೇಳಿಬಿಟ್ಟರೆ ತಪ್ಪಾಗಿ ಬಿಡುತ್ತದೆ ಎಂಬ ಭಾವನೆಯಿಂದ ನಾನು ಮದುವೆಗೆ ಹೋಗಲಿಲ್ಲ. ಇನ್ನು ನಾನು ಮದುವೆಗೆ ಹೋಗಲು ಆಗದಿರುವುದರ ಬಗ್ಗೆ ಯಾರಿಗೆ ಹೇಳಬೇಕೋ ಅವರಿಗೆ ಕರೆ ಮಾಡಿ, ಬರುವುದಕ್ಕೆ ಆಗುವುದಿಲ್ಲ ಕ್ಷಮೆಯಿರಲಿ, ನಾನು ಖಂಡಿತವಾಗಿಯೂ ಇನ್ನೊಂದು ಬಾರಿ ಬಂದು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದೇನೆ. ಯಾಕೆಂದರೆ, ಅವರನ್ನು ಭೇಟಿ ಮಾಡುವುದೆಂದರೆ ನಮ್ಮ ಅದೃಷ್ಟ, ಈ ಬಗ್ಗೆ ಖುಷಿಯೂ ನಮಗಿದೆ. ನಾವು ಅವರನ್ನು ತುಂಬಾ ಗೌರವಯುತವಾಗಿ ಕಾಣುತ್ತೇವೆ. ಆದರೆ, ಆಕಸ್ಮಿಕವಾಗಿ ನನಗೆ ಅನಾರೋಗ್ಯ ಉಂಟಾದ ಕಾರಣ, ಮದುವೆಗೆ ಹೋಗಲು ಹಿಂದೇಟು ಹಾಕಬೇಕಾಯಿತು. ನಮಗೂ ಭಯ ಇರುವುದಿಲ್ಲವೇ? ಅಲ್ಲಿಗೆ ಹೋದ ಮೇಲೆ ಟೆಂಪರೇಚರ್ ಚೆಕ್ ಮಾಡಿ ಸರ್ ಸಾರಿ ಯು ಕ್ಯಾನ್ ನಾಟ್ ಎಂಟರ್ ಎಂದು ಹೇಳಿಬಿಟ್ಟರೆ... ಆಮೇಲೆ ನಿಮಗೆ ಉತ್ತರ ಕೊಡಬೇಕಾಗುತ್ತದೆ. ಅಂಬಾನಿ ಮದುವೆಗೆ ಹೋದ ಕಿಚ್ಚ ಸುದೀಪನಿಗೆ ಒಳಗೆ ಬಿಡಲಿಲ್ಲ ಎಂದು ಹೆಡ್‌ಲೈನ್ ಹಾಕ್ತೀರಾ.. ಅದೆಲ್ಲಾ ಬೇಕಾ ನಮಗೆ? ಎಂದು ಮದುವೆಗೆ ಹೋಗಲಿಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.