ಹೈದರಾಬಾದ್: ಮೊಬೈಲ್ ಫೋನ್‌ನಲ್ಲಿ ಪೋರ್ನ್ ವೀಡಿಯೋಗಳನ್ನು ವೀಕ್ಷಿಸಿ ಉದ್ರೇಕಗೊಂಡಿದ್ದ ಮೂವರು ಅಪ್ರಾಪ್ತರು 8ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ಆಘಾತಕಾರಿ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 7ರಂದು ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ 12ವರ್ಷದ ಇಬ್ಬರು ಮತ್ತು 13 ವರ್ಷದ ಓರ್ವ ಸೇರಿದಂತೆ ಮೂವರು ಬಾಲಕರು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆ ಯಾರಿಗಾದರೂ ಈ ವಿಚಾರವನ್ನು ಹೇಳುತ್ತಾಳೆಂಬ ಭೀತಿಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದರು.
ಅತ್ಯಾಚಾರ ನಡೆಸಿದ ಆರೋಪಿಗಳನ್ನು ಜುಲೈ 10ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಮೂವರೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಆರನೇ ತರಗತಿ ಹಾಗೂ ಮತ್ತೋರ್ವ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳಲ್ಲಿ ಓರ್ವನು ಕೃತ್ಯ ಎಸಗಿದ ಬಳಿಕ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಗಿರುವ ಪ್ರಮಾದದ ಬಗ್ಗೆ ತಿಳಿಸಿದ್ದನು. ಮಕ್ಕಳ ಮೇಲೆ ಕಾನೂನು ಕ್ರಮ ಜರುಗಿಸಬಹುದೆಂಬ ಭೀತಿದಿಂದ ಆತನ ತಂದೆ ಮತ್ತು ಚಿಕ್ಕಪ್ಪ ಸ್ಥಳಕ್ಕೆ ಧಾವಿಸಿ ಬಾಲಕಿಯ ಮೃತವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಕಲ್ಲು ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ. ಅಪ್ರಾಪ್ತರು ಮತ್ತು ಅಪರಾಧಿಗಳ ಕೃತ್ಯ ಮುಚ್ಚಿ ಹಾಕಲು ಯತ್ನಿಸಿದ ಪೋಷಕರನ್ನು ಬಂಧಿಸಲಾಗಿದೆ ಎಂದು ರಾಣಾ ತಿಳಿಸಿದ್ದಾರೆ.
ಉದ್ಯಾನವನದ ಬಳಿ ಆಟವಾಡುತ್ತಿದ್ದ ಬಾಲಕಿಗೆ ಬಾಲಕರ ಪರಿಚಯವಿತ್ತು. ತಮ್ಮೊಂದಿಗೆ ಆಟವಾಡಲು ಆಕೆಯನ್ನು ಮನವೊಲಿಸಿ ಅವರು ಕರೆದೊಯ್ದಿದ್ದಾರೆ. ಬಳಿಕ ಮೂವರೂ ಸೇರಿ ಆಕೆಯ ಬಾಯಿಯನ್ನು ಬಿಗಿದಿಟ್ಟು ಅತ್ಯಾಚಾರ ಎಸಗಿದ್ದಾರೆ. ಆದರೆ ಶ್ವಾನ ಕೊಟ್ಟ ಸುಳಿವನ್ನು ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಮೂರೇ ದಿನದಲ್ಲಿ ಬಂಧಿಸಿದ್ದರು. ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ಮಂಜೂರು ಮಾಡಿದ್ದಾರೆ.
.jpeg)
Social Icons