ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತಿರುವ ಘಟನೆ. ಹಾವಿನ ದ್ವೇಷ ಹನ್ನೆರಡು ವರುಷ ಅನ್ನೋ ಮಾತು ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ. ಅದೇ ಕಾರಣಕ್ಕೆ ಹಾವಿಗೆ ಯಾವುದೇ ತೊಂದರೆ ಕೊಡಬಾರದು, ಹಾವನ್ನು ಸಾಯಿಸಿದರೆ ಅಥವಾ ಅದಕ್ಕೆ ತೊಂದರೆ ಕೊಟ್ಟರೆ ಅದು ಹನ್ನೆರಡು ವರುಷಗಳ ಕಾಲ ಕಾದು ತನ್ನ ದ್ವೇಷವನ್ನು ತೀರಿಸಿಕೊಳ್ಳುತ್ತೆ ಎಂದು ಹೇಳುತ್ತಾರೆ. ಇದು ಸುಳ್ಳು ಎನ್ನುವ ಮಾತನ್ನು ಹೇಳುವವರೂ ಇದ್ದಾರೆ. ಆದರೆ ಈ ಘಟನೆ ಹಾವಿಗೂ ದ್ವೇಷಕ್ಕೂ ಇರುವ ಸಂಬಂಧಕ್ಕೆ ಪುಷ್ಠಿ ನೀಡುವಂತಿದೆ.
ಹೌದು.. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಇಂತಹದೊಂದು ಅಪರೂಪದ ಮತ್ತು ಆಘಾತಕಾರಿ ಘಟನೆ ನಡೆದಿದ್ದು, ಮಾಲ್ವಾ ಪೆÇಲೀಸ್ ಠಾಣೆ ವ್ಯಾಪ್ತಿಯ ಸೌರಾ ಗ್ರಾಮದ ನಿವಾಸಿ 24 ವರ್ಷದ ವಿಕಾಸ್ ದ್ವಿವೇದಿಗೆ 40 ದಿನಗಳಲ್ಲಿ 7 ಬಾರಿ ಹಾವು ಕಚ್ಚಿದೆ. ಆರಂಭದಲ್ಲಿ ಮೂರು ಬಾರಿ ಹಾವು ತನ್ನ ಪಕ್ಕದಲ್ಲೇ ಓಡಿ ಹೋಗುವುದನ್ನು ತನ್ನ ಕಣ್ಣಾರೆ ನೋಡಿದ್ದೇನೆ ಎಂದು ವಿಕಾಸ್ ಹೇಳಿದ್ದಾರೆ. ಅದೊಂದು ಹೆಡೆಯ ಹಾವಾಗಿದ್ದು, ರಾತ್ರಿ ಮಲಗಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಕಾಸ್‍ಗೆ ಕನಸಿನಲ್ಲಿಯೂ ಹಾವು ಕಚ್ಚುವ ಬಗ್ಗೆ ಕಾಡಿದ್ದು, ತನ್ನ ಕನಸಿನಲ್ಲಿ ಬಂದಿರುವ ಹಾವು 9 ಬಾರಿ ಕಚ್ಚುತ್ತದೆ, ಆ ಪೈಕಿ ಎಂಟು ಬಾರಿ ಉಳಿಸುತ್ತದೆ ಮತ್ತು ಪ್ರತೀ ಶನಿವಾರವೇ ಕಚ್ಚುವುದಾಗಿ ಎಂದು ಹೇಳಿರುವುದಾಗಿ ವಿಕಾಸ್ ಹೇಳಿದ್ದಾರೆ. ಇದೇ ವೇಳೆ ಹಾವು ತನಗೆ 9 ನೇ ಬಾರಿ ಕಚ್ಚಿದರೆ ವಿಶ್ವದ ಯಾವುದೇ ಶಕ್ತಿಯು ತನ್ನನ್ನು ಉಳಿಸಲು ಸಾಧ್ಯವಿಲ್ಲ ಎಂದು ವಿಕಾಸ್ ಹೇಳಿಕೊಂಡಿದ್ದಾನೆ. ಇದರಿಂದ ಭಯಗೊಂಡ ವಿಕಾಸ್ ಸಮೀಪದ ಇನ್ನೊಂದು ಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದು, ಆದರೆ ಕಳೆದ ಗುರುವಾರ ರಾತ್ರಿ ಅಲ್ಲಿ ಕೂಡ ಹಾವು ಆತನ ಮಣಿಕಟ್ಟಿನ ಮೇಲೆ ಮತ್ತೊಮ್ಮೆ ಕಚ್ಚಿದೆ ಎನ್ನಲಾಗಿದೆ. ಅಂದಹಾಗೆ ವಿಕಸ್‍ಗೆ ಯಾಕೆ ಹಾವು ಪದೇ ಪದೇ ಕಚ್ಚುತ್ತಿದೆ ಅನ್ನೋದು ತಿಳಿದು ಬರಬೇಕಿದೆ.
ಈ ಬೆಳವಣಿಗೆಯಿಂದ ಅವರ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಪ್ರತಿ ಬಾರಿ ಹಾವು ಕಚ್ಚಿದಾಗಲೂ ಫತೇಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ವಿಕಾಸ್‍ನನ್ನು ಚಿಕಿತ್ಸೆಗಾಗಿ ಐಸಿಯುಗೆ ಸೇರಿಸಬೇಕಾಗಿದೆ. ಪ್ರತಿ ಬಾರಿ ಆಂಟಿ ವೆನಮ್ ಇಂಜೆಕ್ಷನ್ ನೀಡಲಾಗುತ್ತಿದೆ ಎಂದು ವಿಕಾಸ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಜವಾಹರ್ ಲಾಲ್ ತಿಳಿಸಿದ್ದಾರೆ. ಎಲ್ಲರೂ ಹಾವು ಕಚ್ಚಿದಾತನ ಆರೋಗ್ಯ ಕ್‍ಷೇಮ ವಿಚಾರಣೆ, ಜೊತೆಗೆ ಹಾವಿನ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಘಟನೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
Social Icons