ನವದೆಹಲಿ: ಚಿನ್ನ ಪ್ರಿಯರು ಭರ್ಜರಿಯಾಗಿ ಖುಷಿಪಡುವ ಸುದ್ದಿಯಿದು. ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 15 ರಿಂದ 6ಕ್ಕೆ ಇಳಿಕೆ ಮಾಡಿದ ಬಳಿಕ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಎರಡೇ ದಿನದಲ್ಲಿ ಚಿನ್ನದ ದರದಲ್ಲಿ 4 ಸಾವಿರ ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ 3600 ರೂಪಾಯಿ ಇಳಿಕೆಯಾಗಿದೆ.
ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ
ಕಸ್ಟಮ್ ಸುಂಕವನ್ನು 15% ರಿಂದ 6% ಕ್ಕೆ ಇಳಿಸಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ
ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇಂದು ಚಿನ್ನದ ಬೆಲೆ ದೇಶದಲ್ಲಿ ಸರಾಸರಿ 408 ರೂಪಾಯಿ ಇಳಿಕೆಯಾಗಿದೆ. ಇದರಿಂದ 10 ಗ್ರಾಮ್ ಚಿನ್ನದ ಬೆಲೆ ದೇಶಲ್ಲಿ 69194 ರೂಪಾಯಿ ಆಗಿದೆ. ಬಜೆಟ್ ದಿನದಂದು ಆಮದು ಸುಂಕ ಕಡಿಮೆ ಮಾಡುವ ಘೋಷಣೆ
ಮಾಡಿದ ಬೆನ್ನಲ್ಲಿಯೇ ಚಿನ್ನದ ಬೆಲೆಯಲ್ಲಿ 3600 ರೂಪಾಯಿ
ಇಳಿಕೆಯಾಗಿತ್ತು. ಬೆಳ್ಳಿ ಬೆಲೆಯಲ್ಲೂ ಇಂದು 22 ರೂಪಾಯಿ
ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 84,897 ರೂಪಾಯಿ
ಇದೆ. ಸೋಮವಾರ ಬೆಳ್ಳಿ ಬೆಲೆಯಲ್ಲಿ 3600 ರೂಪಾಯಿ
ಇಳಿಕೆಯಾಗಿತ್ತು. ಜುಲೈ 22 ರಂದು
ಚಿನ್ನದ ಬೆಲೆ 10 ಗ್ರಾಮ್‌ಗೆ 73,218 ರೂಪಾಯಿ ಇದ್ದರೆ, ಬೆಳ್ಳಿ
ಬೆಲೆ ಕೆಜಿಗೆ 88196 ರೂಪಾಯಿ ಆಗಿತ್ತು.
ಈ ಬಾರಿಯ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್
ಸುಂಕವನ್ನು 15% ರಿಂದ 6% ಕ್ಕೆ
ಇಳಿಸಲಾಗಿದೆ. ಇದರಿಂದಾಗಿ ಅದರ ಬೆಲೆಯಲ್ಲಿ ಕುಸಿತ ಕಾಣುತ್ತಿದೆ. ಆದರೆ ಕಸ್ಟಮ್ ಸುಂಕ ಕಡಿತದ
ನಂತರ ಮುಂದಿನ ದಿನಗಳಲ್ಲಿ ಚಿನ್ನದ ಬೇಡಿಕೆ ಇನ್ನಷ್ಟು ವೇಗವಾಗಿ ಹೆಚ್ಚಲಿದೆ. ಈಗ
ಚಿನ್ನ, ಬೆಳ್ಳಿ ಕುಸಿದಿದ್ದರೂ ಸುಂಕ ಹೊಂದಾಣಿಕೆ
ಎನ್ನಬಹುದು. ಸ್ವಲ್ಪ ದಿನ ಚಿನ್ನ ಬಿದ್ದರೂ ಮತ್ತೆ ಚೇತರಿಸಿಕೊಳ್ಳುತ್ತದೆ. ಅಮೆರಿಕದ ಚುನಾವಣೆ
ಮತ್ತು ಜಾಗತಿಕ ಉದ್ವಿಗ್ನತೆಯನ್ನು ಪರಿಗಣಿಸಿದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚು
ಕಡಿಮೆಯಾಗುವುದಿಲ್ಲ. ಖರೀದಿಸಲು ಇದು ಉತ್ತಮ ಅವಕಾಶ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

Social Icons