ಮದ್ವೆಯಾದ 3 ನಿಮಿಷಕ್ಕೆ ದಾಂಪತ್ಯಕ್ಕೆ Good Bye..!| ಡಿವೋರ್ಸ್​ಗೆ ಕಾರಣವಾಗಿದ್ದು ಯಾವುದು?

ಕುವೈತ್​​: ಇತ್ತೀಚಿನ ದಿನಗಳಲ್ಲಿ ಸಂಬಂಧದ ಬೆಲೆ ತಿಳಿಯದೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ಎನ್ನುವ ಸಂಬಂಧ ಯಾವಾಗ ಕೂಡಿ ಬರುತ್ತದೆ ಯಾವಾಗ ಅಂತ್ಯ ಹಾಡುತ್ತಾರೆ ಎನ್ನುವ ಯಾವುದೇ ಪರಿವೇ ಇಲ್ಲದಾಗಿದೆ. ಕುವೈತ್​ನಲ್ಲೊಂದು ಜೋಡಿ ಮದುವೆಯಾಗಿ 3 ನಿಮಿಷದಲ್ಲಿ ಮುರಿದು ಕೊಂಡಿದ್ದಾರೆ.



ಮದುವೆಗಾಗಿ ಚೆನ್ನಾಗಿ ರೆಡಿಯಾಗಿ ಕೋರ್ಟ್​ ಬಂದ ಜೋಡಿ. ನ್ಯಾಯಾಲಯದ ಸಮ್ಮುಖದಲ್ಲಿ ಮದುವೆಯಾದರು. ಆದರೆ ಕೋರ್ಟ್​​ನಿಂದ ಹೊರ ಬರುವಾದ ವಧು ಕಾಲು ಎಡವಿ ವರನ ಮೇಲೆ ಬೀಳುತ್ತಾಳೆ. ಆದರೆ ವರ ಆಕೆಯನ್ನು ತಳ್ಳಿ ಸ್ಟುಪಿಡ್​​ ಎಂದು ಕೇಳುತ್ತಾನೆ. ವರನ ಬಾಯಲ್ಲಿ ಸ್ಟುಪಿಡ್​ ಎಂಬ ಪದ ಬಂದಿದ್ದೇ ತಡ, ವಧು ಸಿಟ್ಟಿಗೆದ್ದಿದ್ದಾಳೆ. ವರನ ವಿರುದ್ಧ ಕೋರ್ಟ್​ನಲ್ಲಿ ಗುಡುಗಿದ್ದಾಳೆ. ನನಗೆ ಈ ಸಂಬಂಧ, ಮದುವೆ ಬೇಡವೆಂದಿದ್ದಾಳೆ. ಕೊನೆಗೆ ಮದುವೆಗೆ ಎಂದು ಬಂದಿದ್ದ ಕೋರ್ಟ್​ನಲ್ಲಿ ಡಿವೋರ್ಸ್​ ಕೂಡ ಪಡೆದುಕೊಂಡಿದ್ದಾರೆ. ತಮ್ಮ ಮದುವೆಯನ್ನು ತಕ್ಷಣವೇ ನಿಲ್ಲಿಸುವಂತೆ ನ್ಯಾಯಾಧೀಶರನ್ನು ಕೇಳಿದರು. ನ್ಯಾಯಾಧೀಶರು ಒಪ್ಪಿಕೊಂಡರು ಮತ್ತು ಅವರನ್ನು ಮದುವೆಯಾದ ಕೇವಲ ಮೂರು ನಿಮಿಷಗಳ ನಂತರ ರದ್ದುಗೊಳಿಸಿದರು.

3 ನಿಮಿಷಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಅಂದಹಾಗೆಯೇ ಇದು ಕುವೈತ್​​ನ ಅತ್ಯಂತ ಕಡಿಮೆ ಅವಧಿಯಲ್ಲಿ ವಿವಾಹವಾಗಿ ಮುರಿದ ಬಿದ್ದ ಘಟನೆಯಾಗಿದೆ. ಈ ಘಟನೆ 2019 ರಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಈ ಸುದ್ದಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ. ಯಾವುದೇ ಗೌರವವಿಲ್ಲದ ಮದುವೆಯು ಮೊದಲಿನಿಂದಲೂ ವಿಫಲವಾಗಿದೆ, ಆರಂಭದಲ್ಲಿ ಅವನು ಈ ರೀತಿ ವರ್ತಿಸಿದರೆ, ಅವನನ್ನು ಬಿಡುವುದು ಉತ್ತಮ ಎಂದು ಹೇಳಿದ್ದಾರೆ.