ಮಧ್ಯಪ್ರದೇಶ: ಆತನ ಗ್ರಹಚಾರ ಹೇಗಿತ್ತೋ ಏನೋ?. ಬೆಳ್ಳಂಬೆಳಗ್ಗೆ ಬಯಲಿಗೆ ಶೌಚಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಬರೋಬ್ಬರಿ 13 ಅಡಿ ಉದ್ದದ ಬೃಹತ್ ಹೆಬ್ಬಾವು ದಾಳಿ ಮಾಡಿ ಆತನನ್ನು ನುಂಗಲು ಮುಂದಾಗಿದೆ. ಬಹಿರ್ದೆಸೆಗೆ ಕುಳಿತ ವ್ಯಕ್ತಿಯ ಎರಡೂ ಕಾಲುಗಳು ಹಾಗೂ ಕುತ್ತಿಗೆಗೆ ಸುತ್ತಿಕೊಂಡು ಕೈಗಳನ್ನು ನುಂಗಿದೆ. ಇನ್ನೇನು ಆತನನ್ನು ಪೂರ್ತಿಯಾಗಿ ನುಂಗಬೇಕು ಎನ್ನುವಷ್ಟರಲ್ಲಿ ಗ್ರಾಮಸ್ಥರು ಹೆಬ್ಬಾವಿನ ಕೈಯಿಂದ ಈ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಜು.22ರಂದು ಮಧ್ಯಪ್ರದೇಶ
ರಾಜ್ಯದ ಜಬ್ಬಲಪುರ ಬಳಿಯ ಗ್ರಾಮದಲ್ಲಿ. ಗ್ರಾಮ್ ವ್ಯಕ್ತಿಯೋರ್ವ ಎಂದಿನಂತೆ
ಬೆಳಗ್ಗೆ ಮಲವಿಸರ್ಜನೆಗೆಂದು ಕಾಡಿಗೆ ತೆರಳಿದ್ದ. ಈ ವೇಳೆ 13 ಅಡಿ
ಹೆಬ್ಬಾವು ದಾಳಿ ಮಾಡಿದೆ. ವ್ಯಕ್ತಿ ಮರದ ಕೆಳಗೆ ಶೌಚಕ್ಕೆ ಕುಳಿತಿದ್ದು,
ಮರದ ಮೇಲಿಂದಲೇ ಆತನ ಮೇಲೆ ಹೆಬ್ಬಾವು ದಾಳಿ ಮಾಡಿದೆ. ಕುಳಿತವನು ಮೇಲೇಳಲೂ ಸಾಧ್ಯವಾಗದಂತೆ
ಆತನ ಕಾಲುಗಳನ್ನು ಸುತ್ತಿಕೊಂಡಿದೆ. ಕೂಡಲೇ ಆತ ಜೋರಾಗಿ ಸಹಾಯಕ್ಕಾಗಿ ಕಾಪಾಡಿ, ಕಾಪಾಡಿ ಎಂದು
ಕೂಗಿಕೊಂಡಿದ್ದಾನೆ. ಶೌಚಕ್ಕೆ ತೆರಳಿದ್ದ ಇತರೆ ರೈತರು ಸಹಾಯಕ್ಕಾಗಿ
ಕೂಗಿಕೊಂಡ ವ್ಯಕ್ತಿಯ ಧ್ವನಿ ಕೇಳಿ ಸ್ಥಳಕ್ಕೆ ಬರುವಷ್ಟರಲ್ಲಿ ಆತನ ಕುತ್ತಿಗೆಗೂ ಹೆಬ್ಬಾವು
ಸುತ್ತಿಕೊಂಡಿದೆ. ಆದರೆ,
ಒಂದಿಬ್ಬರಿಂದ ಹೆಬ್ಬಾವಿನ ಹಿಡಿತದಲ್ಲಿದ್ದ ವ್ಯಕ್ತಿಯನ್ನು ಬಿಡಿಸಲು ಸಾಧ್ಯವಿಲ್ಲ
ಎಂಬುದನ್ನು ಅರಿತು ಸಹಾಯಕ್ಕಾಗಿ ಗ್ರಾಮದಲ್ಲಿದ್ದ ಇತರೆ ಪುರುಷರನ್ನು ಸ್ಥಳಕ್ಕೆ ಕರೆದಿದ್ದಾರೆ.
ಈ ವೇಳೆ ಕೆಲವರು ಹರಿತವಾದ ಆಯುಧ,
ಕಟ್ಟಿಗೆ, ದೊಣ್ಣೆಗಳನ್ನು
ಹಿಡಿದು ಸ್ಥಳಕ್ಕೆ ಬಂದಿದ್ದಾರೆ. ಆದರೆ,
ಅದಾಗಲೇ ಹೆಬ್ಬಾವು ಬಹಿರ್ದೆಸೆಗೆ ಕುಳಿತಿದ್ದ ವ್ಯಕ್ತಿಯನ್ನು ಬಿಗಿಯಾಗಿ ಹಿಡಿದುಕೊಂಡು
ತನ್ನ ಹಿಡಿತವನ್ನು ಮತ್ತಷ್ಟು ಬಿಗಿ ಮಾಡಲು ಮುಂದಾಗಿದೆ.
Social Icons