ಕಾಳಿಂಗ ಸರ್ಪ ಎಂದರೆ ಯಾರಿಗೆ ಭಯವಿಲ್ಲ ಹೇಳಿ? ಎಂತಹ ಗಟ್ಟಿ ಮನಸ್ಸಿನವರಿಗಾದರೂ ಕಾಳಿಂಗ ಸರ್ಪವನ್ನು ಕಂಡಾಗ ದಿಗಿಲು ಆಗಿಯೇ ಆಗುತ್ತದೆ. ಅದರಲ್ಲೂ ಬರೋಬ್ಬರಿ 12 ಅಡಿಯಷ್ಟು ಬೃಹತ್ ಗಾತ್ರದ ಹಾವು ಕಂಡರೆ ಹೇಗಾಗಬಹುದು?
ಆಗುಂಬೆಯ ಮನೆಯೊಂದರ ಬಳಿ ಇಂತಹುದೇ ದೊಡ್ಡ ಸರ್ಪ ಕಾಣಿಸಿಕೊಂಡಿತ್ತು. ಅಲ್ಲಿಂದ ಈ ಬೃಹತ್ ಕಾಳಿಂಗ ಸರ್ಪವನ್ನು ಮಾಡಿ ಮರಳಿ ಅದನ್ನು ಕಾಡಿಗೆ ಬಿಡಲಾಗಿದೆ. ಆದರೆ ಈ ಕಾರ್ಯಾಚರಣೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.
ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂತಹದ್ದೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಕಾಳಿಂಗ ಸರ್ಪದ ರಕ್ಷಣಾ ಕಾರ್ಯಾಚರಣೆಯ ಅದ್ಭುತ ದೃಶ್ಯವಿದೆ. ಈ ಕಾಳಿಂಗ ಸರ್ಪ ರಸ್ತೆ ದಾಟುತ್ತಾ ಬರುತ್ತಿರುವುದನ್ನು ಸ್ಥಳೀಯರ ಗಮನಿಸಿದ್ದರು. ಇದಾದ ಬಳಿಕ ಈ ಹಾವು ಸಣ್ಣ ಮರವೊಂದರಲ್ಲಿ ಆಶ್ರಯ ಪಡೆದಿತ್ತು. ಈ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಆರ್‌ಆರ್‌ಎಸ್ ತಂಡ ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿತು. ಬಳಿಕ ಬಳಿಕ ಉರಗ ರಕ್ಷಕ ಈ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಹೀಗೆ ಹಿಡಿದ ಹಾವನ್ನು ನಂತರ ಅದರ ಸಹಜ ಆವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡಲಾಯಿತು. ಹಾವು ಹಿಡಿಯುವ ಕಾರ್ಯಾಚರಣೆಯ ಈ ಪೂರ್ಣ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Social Icons