ಮಂಗಳೂರು:ಭಜನೆ ಎಂಬುದು ನಮ್ಮ ಸಂಸ್ಕೃತಿ. ಅದನ್ನು ನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ಸುರಗರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೆಸರ ಧನಂಜಯ ಪಿ. ಶೆಟ್ಟಿಗಾರ್ ಹೇಳಿದರು.
ಅವರು ಕಿನ್ನಿಗೋಳಿ ರಾಜರತ್ನಪುರ
ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಕಿನ್ನಿಗೋಳಿ
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ
ಶ್ರೀ ವಿಶ್ವಕರ್ಮ ಭಜನ ಮಂಡಳಿವತಿಯಿಂದ ಜರಗುವ 11 ನೇ ವರ್ಷದ ಭಜನಾ
ಮಂಗಳೋತ್ಸವದಲ್ಲಿ ದೀಪ
ಪ್ರಜ್ವಲನೆ ಮಾಡಿ ಮಾತನಾಡಿದರು.
ಕಿನ್ನಿಗೋಳಿ
ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ
ಶೆಣೈ ಮಾತಾನಡಿ ನಮ್ಮ ಸಂತ ಸಾಧುಗಳಾದ ಕನಕದಾಸ ಪುರಂದರ ದಾಸರ ಭಜನೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ
ಜೀವನ ಬದುಕು ಪಾವನ ಎಂದು ಹೇಳಿದರು.
ವಿಶ್ವಬ್ರಾಹ್ಮಣ
ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಯೋಗೀಶ್ ಆಚಾರ್ಯ ಮಾರಡ್ಕ , ಸಭಾಭವನ ಸಮಿತಿಯ ಅಧ್ಯಕ್ಷ ಎಂ.
ಪೃಥ್ವಿರಾಜ ಆಚಾರ್ಯ, ಕಾಳಿಕಾಂಬ ಮಹಿಳಾ ಮಂಡಳಿಯ ಅಧ್ಯಕ್ಷೆ ಶಶಿಕಲಾ
ಬಿ. ಜಿ. ಯೋಗೀಶ್ ಆಚಾರ್ಯ , ಪ್ರಭಾಕರ ಆಚಾರ್ಯ, ಉದಯಕುಮಾರ್, ದಿನೇಶ್ ಆಚಾರ್ಯ, ಶಿವಪ್ರಸಾದ್ ಆಚಾರ್ಯ, ಯೋಗೀಶ್
ಆಚಾರ್ಯ, ಜಗದೀಶ ಗುತ್ತಕಾಡು, ಜಗದೀಶ ಆಚಾರ್ಯ, ಜಗದೀಶ ಆಚಾರ್ಯ ಸುರಗಿರ ಮತ್ತಿತರು
ಉಪಸ್ಥಿತರಿದ್ದರು. ಸುಮಾರು 20 ಕ್ಕೂ ಮಿಕ್ಕಿ
ಭಜನಾ ಮಂಡಳಿಗಳಿಂದ ಭಜನ ಕಾರ್ಯಕ್ರಮ ನಡೆಯಿತು.

Social Icons