ಮುಂಬೈ: ತೈಲಬೆಲೆ ಆಕಾಶಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಟೂವೀಲರ್ ಇರ್ಲಿ, ಅದರಲ್ಲಿ ಮೈಲೇಜ್ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಪ್ರಮುಖ ಟೂವೀಲರ್ ಉತ್ಪಾದನಾ ಸಂಸ್ಥೆ ಬಜಾಜ್ ವಿನೂತನ ಬೈಕ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹೌದು, ಸಿಎನ್‌ಜಿ ಅಂದರೆ ಸಾಂದ್ರೀಕೃತ ನೈಸರ್ಗಿಕ ಅನಿಲದ ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್ ಸೈಕಲ್ ನ್ನು ಬಜಾಜ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೈಕ್ ಬಿಡುಗಡೆ ಮಾಡಿದರು.
ಅಂದಹಾಗೆ ಈ ಬೈಕ್ ಗೆ 'ಫ್ರೀಡಂ' ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ 95 ಸಾವಿರ ರು. ನಿಂದ ಆರಂಭವಾಗಲಿದೆ. ಈ ಬೈಕ್ ಪೆಟ್ರೋಲ್ ಹಾಗೂ ಸಿಎನ್‌ಜಿನಿಂದಲೂ ಚಲಿಸುತ್ತದೆ. ಚಾಲಕರು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ಬೈಕ್ 1 ಕೆಜಿ ಸಿಎನ್‌ಜಿಗೆ 102 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಫ್ರೀಡಂ ಎನ್‌ಜಿಒ4 ಡ್ರಮ್ ಬೈಕ್ ಬೆಲೆ ರೂ.95,000, ಮಿಡ್-ಸ್ಪೆಕ್ ಎನ್‌ಜಿಒ4 ಡ್ರಮ್ ಎಲ್‌ಇಡಿ ಬೈಕ್ ಬೆಲೆ ರೂ. 1.05 ಲಕ್ಷ ಹಾಗೂ ಟಾಪ್-ಸ್ಟೆಕ್ ಎನ್‌ಜಿಒ4 ಡಿಸ್ಕ್ ಎಲ್ ಇಡಿ ಬೈಕ್ ಬೆಲೆ ರೂ. 1.10 ಲಕ್ಷ ಇದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಟೂವೀಲರ್ ಕ್ಷೇತ್ರದಲ್ಲಿ ವಿನೂತನ ಮೈಲಿಗಲ್ಲು ಸಾಧಿಸಲು ಬಜಾಜ್ ಫ್ರೀಡಂ ಸಜ್ಜಾಗಿದೆ.

Social Icons