ಮುಗಿಯದ ಟ್ರಾಫಿಕ್ ಜಾಮ್| ಬೈಕನ್ನೇ ಬಾಹುಬಲಿಯಂತೆ ಎತ್ತಿಕೊಂಡು ನಡೆದ ಯುವಕ| Video Viral

ಬೆಂಗಳೂರು: ಟ್ರಾಫಿಕ್‌ಜಾಂ ಇಂದು‌ ಬೆಳೆಯಿತ್ತಿರುವ  ನಗರಗಳ ದೊಡ್ಡ ಸಮಸ್ಯೆ. ದಿಲ್ಲಿ,‌ಮುಂಬೈ, ಬೆಂಗಳೂರು, ಚೆನ್ನೈ ಹೀಗೆ ಯಾವ ನಗರದಲ್ಲೂ ಟ್ರಾಫಿಕ್ ಜಾಮ್‌ ಕಡಿಮೆ ಇಲ್ಲ. ಈಗ ಮಂಗಳೂರಿನಲ್ಲಿ ಕೂಡ‌ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಎಲ್ಲಿ ಹೋಗ್ಬೇಕಾದ್ರೂ ಒಂದೆರಡು ಗಂಟೆ ಮುಂಚೆಯೇ ಹೊರಡಬೇಕು. ಟ್ರಾಫಿಕ್​​ ಜಾಮ್​ನಿಂದ ಎಷ್ಟೇ ಕೋಪ ಬಂದರೂ ಕೂಡ ಗಂಟೆಗಟ್ಟಲೆ ಕಾಯುವುದನ್ನು ಮಾತ್ರ ಏನು ಮಾಡಲು ಸಾಧ್ಯವಿಲ್ಲ. ಇದೀಗ ಟ್ರಾಫಿಕ್ ಜಾಮ್‌ನಿಂದಾಗಿ ವ್ಯಕ್ತಿಯೊಬ್ಬರು ತೀವ್ರ ಅಸಮಾಧಾನಗೊಂಡು ಬಹುಬಲಿಯಂತೆ ತನ್ನ ಬೈಕ್​​ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.



ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಯೊಬ್ಬ ಅಷ್ಟು ವಾಹನ ದಟ್ಟಣೆಯ ನಡುವೆ ತನ್ನ ಬೈಕ್​​ ಎತ್ತಿಕೊಂಡು ನಡೆಯುತ್ತಿರುವ ದೃಶ್ಯ ಒಮ್ಮೆಗೆ ಬಾಹುಬಲಿ ಸಿನಿಮಾ ನೆನಪಿಸುತ್ತದೆ. ಸಾಕಷ್ಟು ದೂರದ ವರೆಗೆ ಟ್ರಾಫಿಕ್​​ ಜಾಮ್​​ನಲ್ಲಿ ಸಿಲುಕಿರುವ ಜನರು ಏಕಾಏಕಿ ಈ ದೃಶ್ಯ ಕಂಡು ದಂಗಾಗಿ ಹೋಗಿದ್ದಾರೆ. 


ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ಬರು ಬೈಕ್​​ ಎತ್ತಿಕೊಂಡು ಬರುವ ದೃಶ್ಯವನ್ನು ತಮ್ಮ ಮೊಬೈಲ್​​​ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

https://www.instagram.com/_u/basit_ki_memes/?utm_source=ig_embed&ig_rid=a2a8d558-bcc6-4092-ad10-2e7e1a84c420&ig_mid=2065E404-327A-4975-B067-5C7134A4C834

@basit_ki_memes ಎಂಬ ಹೆಸರಿನ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್​​ 18ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್​​ ಅಂದರೆ 30 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 231,489 ನೆಟ್ಟಿಗರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುಶಃ ಈ ವೀಡಿಯೋ ನಮ್ಮಲ್ಲಿ ವಾಹನ ಟ್ರಾಫಿಕ್ ಎಷ್ಟಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ.