Uppinangady : ಬಹುಮಹಡಿ ಕಟ್ಟಡಕ್ಕೆ ಬೆಂಕಿ- ವ್ಯಾಪಕ‌ ಹಾನಿ

 


ವರದಿ : ಕವಿತಾ ಕೆ ಮಾಣಿ


ಪುತ್ತೂರು: ಇಲ್ಲಿನ ಬ್ಯಾಂಕ್ ರಸ್ತೆಯ ಬಹುಮಹಡಿ ಕಟ್ಟಡಕ್ಕೆ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, 5ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.


ಇಲ್ಲಿನ ಅಂಚೆ ಕಚೇರಿ ಸಮೀಪದ ಪೃಥ್ವಿ ಮಹಲ್ ಕಟ್ಟಡಕ್ಕೆ ಅಗ್ನಿ ಸ್ಪರ್ಶವಾಗಿದ್ದು, ದುರಂತಕ್ಕೆ ಶಾರ್ಟ್‌ಸರ್ಕ್ಯೂಟ್ ಕಾರಣ ಎಂದು ತಿಳಿದು ಬಂದಿದೆ. ಕಟ್ಟಡದ ತಳ ಅಂತಸ್ತಿನಲ್ಲಿರುವ ಬೇಕರಿ, ಮೊಬೈಲ್ ಅಂಗಡಿ, ಚಪ್ಪಲಿ ಅಂಗಡಿ, ಫ್ಯಾನ್ಸಿ ಸಹಿತ ಹಲವು ಅಂಗಡಿಗಳಿಗೂ ಬೆಂಕಿ ಹಬ್ಬಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಶ್ರಮಿಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.





ಪೃಥ್ವಿ ವಾಣಿಜ್ಯ ಮಳಿಗೆಗಳ ಅಂಗಡಿ ಮಾಲಕರು ರಾತ್ರಿ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.


ಮೊದಲಿಗೆ ಫ್ಯಾನ್ಸಿ ಅಂಗಡಿಯಿಂದ ಹೊಗೆ ಕಾಣಿಸಿಕೊಂಡಿತ್ತು ಬಳಿಕ ಬೆಂಕಿ ವ್ಯಾಪಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.



ಉಪ್ಪಿನಂಗಡಿ ಪೊಲೀಸರು ಸ್ಥಳದಲ್ಲಿದ್ದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.