ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮರ್ ಯು. ಎಚ್ ಅಧಿಕಾರ ಸ್ವೀಕಾರ UMAR U H

 

 


ಮಂಗಳೂರು:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಗುರುವಾರ ಅಕಾಡೆಮಿ ಕಚೇರಿಯಲ್ಲಿ ನೆರವೇರಿತು. 

 

ನೂತನ ಅಧ್ಯಕ್ಷರಾಗಿ ಉಮರ್ ಯು ಎಚ್ ಅಧಿಕಾರ ಸ್ವೀಕರಿಸಿದರು.

 

ಈ ಸಂದರ್ಭದಲ್ಲಿ  ಮಾಜಿ ಅಧ್ಯಕ್ಷರಾದ ರಹೀಮ್ ಉಚ್ಚಿಲ್, ಮುಹಮ್ಮದ್ ಹನೀಫ್,  ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ    ಸ್ಟಾನ್ಲಿ ಅಲ್ವಾರಿಸ್‌ , ಬ್ಯಾರಿ ಸಾಹಿತ್ಯ ಅಕಾಡೆಮಿ ಯ  ರಿಜಿಸ್ಟ್ರಾರ್   ರಾಜೇಶ್ ಜಿ, ಅಕಾಡೆಮಿಯ ನೂತನ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.