ಸರಕಾರಿ ಉದ್ಯೋಗ ಹೊಂದಬೇಕೆನ್ನುವುದು ಬಹುತೇಕರ ಕನಸು. ಆದರೆ ಕೇಂದ್ರ ಅಥವಾ ರಾಜ್ಯ ಸರಕಾರೀ ಉದ್ಯೋಗ ಪಡೆಯಲು ಪದವಿ ಬೇಕೇ ಬೇಕು ಎನ್ನುವುದು ಬಹುತೇಕರ ಅನಿಸಿಕೆ. ಆದರೆ ನೀವು ಕೇವಲ ಎಸೆಸೆಲ್ಸಿ ಶಿಕ್ಷಣ ಪಡೆದಿದ್ದರೂ ಸಾಕು. ಕೇಂದ್ರ ಸರಕಾರದ ಹಲವು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿ, ಆಯ್ಕೆಯಾಗಿ ಉದ್ಯೋಗ ಪಡೆಯಬಹುದು.
ಎಸ್‌ಎಸ್‌ಎಲ್‌ಸಿ
ಪಾಸಾದವರಿಗೆ ಲಭಿಸುವಂತೆ, ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ಹಲವು ಹುದ್ದೆಗಳು ಲಭ್ಯವಿವೆ. ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ, ಕೇಂದ್ರ ಸರ್ಕಾರದ ಇಲಾಖೆಗಳು, ಸಂಸ್ಥೆಗಳು, ಸಚಿವಾಲಯಗಳಲ್ಲಿ ಉದ್ಯೋಗಾವಕಾಶ ಇದೆ. ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಲಭ್ಯ ಇರುವ ಈ ಕೇಂದ್ರ
ಸರ್ಕಾರಿ ಹುದ್ದೆಗಳಿಗೆ ಸಹ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ಆಕರ್ಷಕ ಸಂಬಳದ ಜತೆಗೆ,
ಲೈಫ್ ಸೆಟಲ್ಡ್
ಮಾಡಿಕೊಳ್ಳಲು ಬಯಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗಿದ್ದರೆ ಯಾವುದೆಲ್ಲಾ
ಉದ್ಯೋಗಾವಕಾಶಗಳು ಇವೆ ಎಂದರೆ.
ಕರ್ನಾಟಕ ಸರ್ಕಾರಿ
ಗ್ರೂಪ್ ಡಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪರಿಗಣಿಸುವಂತೆ ಕೇಂದ್ರ ಸರ್ಕಾರದ
ಸಚಿವಾಲಯಗಳು, ಕಚೇರಿಗಳು,
ಇಲಾಖೆಗಳು, ಸಂಸ್ಥೆಗಳ ಹಲವಾರು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗೆ
ಸಹ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಪರಿಗಣಿಸಲಾಗುತ್ತದೆ. ಸಿಬ್ಬಂದಿ ನೇಮಕಾತಿ ಆಯೋಗ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ.
ಕೇಂದ್ರ ರಕ್ಷಣಾ
ಪಡೆಗಳಾದ ಭೂಸೇನೆ, ವಾಯುಸೇನೆ,
ನೌಕಾಪಡೆಗಳಲ್ಲಿ ಅಗ್ನಿಪಥ
ಯೋಜನೆಯಡಿ ಸಹ 10ನೇ ತರಗತಿ / ಎಸ್‌ಎಸ್‌ಎಲ್‌ಸಿ
ವಿದ್ಯಾರ್ಹತೆಯುಳ್ಳವರನ್ನು Matric Recruit ಮಟ್ಟದಲ್ಲಿ ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ವಿದ್ಯಾರ್ಹತೆಯನ್ನು ಕಡ್ಡಾಯವಾಗಿ
ಶಿಕ್ಷಣ ಸಚಿವಾಲಯದ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಪಾಸ್ ಮಾಡಿರಬೇಕು ಅಷ್ಟೆ. ಈ ಹುದ್ದೆಗಳ
ನೇಮಕ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ
ಪರೀಕ್ಷೆಗಳನ್ನು ನಡೆಸಲಾಗುತ್ತದೆ.ಈ ಮೂಲಕ ಇಲ್ಲಿ ಉದ್ಯೋಗ ಪಡೆಯಬಹುದು.
ಭಾರತೀಯ
ರೈಲ್ವೆಯಲ್ಲಿನ ಹಲವು ಹುದ್ದೆಗಳಿಗೆ ಸಹ ಎಸ್‌ಎಸ್‌ಎಲ್‌ಸಿ / ಹತ್ತನೇ ತರಗತಿ ವಿದ್ಯಾರ್ಹತೆ
ಪರಿಗಣಿಸಲಾಗುತ್ತದೆ. ರೈಲ್ವೆಯಲ್ಲಿನ ಗ್ರೂಪ್ ಡಿ ಹುದ್ದೆಗಳು ಇವಾಗಿದ್ದು, ರೈಲ್ವೆ ಇಲಾಖೆ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಾಗ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ನೇಮಕ
ಪರೀಕ್ಷೆಗಳನ್ನು ಪಾಸ್ ಮಾಡಿ, ಹುದ್ದೆಗೆ
ಸೇರಬಹುದು.
ಸಿಆರ್‌ಪಿಎಫ್ ಕಾನ್ ಸ್ಟೇಬಲ್
ಕೇಂದ್ರ ಮೀಸಲು ಪೊಲೀಸ್ ಪಡೆಗಳಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಇಂಡೋ ಟಿಬೆಟನ್ ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್, ಶಾರ್ಟ್ ಸರ್ವೀಸ್ ಕಮಿಷನ್, ಎನ್‌ಎಸ್‌ಜಿ, ಎಸ್‌ಎಸ್‌ಬಿ ಪಡೆಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಪ್ರತಿ ವರ್ಷ ಎಸ್‌ಎಸ್‌ಸಿ ಅಧಿಸೂಚನೆ ಬಿಡುಗಡೆ ಮಾಡುತ್ತದೆ. ಈ ಹುದ್ದೆಗಳಿಗೆ ಸಹ ಅರ್ಜಿ ಹಾಕಲು ಕೇವಲ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾಗಿದ್ರೆ ಸಾಕು. ಈ ಹುದ್ದೆಗಳಿಗೆ ಅರ್ಜಿ ಹಾಕುವವರಿಗೆ ಈ ವಿದ್ಯಾರ್ಹತೆ ಮಟ್ಟದ ವಿಷಯಗಳ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಇರುತ್ತದೆ ಅಷ್ಟೆ. ಆಕರ್ಷಕ ಮಾಸಿಕ ಸಂಬಳ ಈ ಹುದ್ದೆಗಳಿಗೆ ಇರುತ್ತದೆ.
ಸಿಬ್ಬಂದಿ ನೇಮಕಾತಿ ಆಯೋಗ (Multi Tasking Staff) ಪ್ರತಿ ವರ್ಷವು ಹಲವು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳ ಪೈಕಿ ಕೇಂದ್ರ ಸರ್ಕಾರದ ಇಲಾಖೆಗಳು / ಸಂಸ್ಥೆಗಳು / ಕಛೇರಿಗಳಲ್ಲಿ ಗ್ರೂಪ್ ಸಿ ನಾನ್ ಗೆಜೆಟೆಡ್ ಹುದ್ದೆಗಳಾದ ಮಲ್ಟಿ ಟಾಸ್ಕಿಂಗ್ ಸ್ಟಾಫ್, ಹವಾಲ್ದಾರ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿ, ಅರ್ಜಿ ಆಹ್ವಾನಿಸುತ್ತದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ಭಾರತೀಯ ಅಂಚೆ
ಇಲಾಖೆಯು (Indian Post) ದೇಶದಾದ್ಯಂತ
ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಲ್ಲೂ ಅಂಚೆ ಕಚೇರಿಗಳನ್ನು ಹೊಂದಿದೆ. ಇವುಗಳಿಗೆ ಪ್ರತಿ ವರ್ಷ
ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವ ಒಂದು ಹುದ್ದೆ ಎಂದರೆ ಅದೇ ಗ್ರಾಮೀಣ ಡಾಕ್ ಸೇವಕ್ /
ಪೋಸ್ಟಲ್ ಅಸಿಸ್ಟಂಟ್ / ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗಳು. ಈ ಹುದ್ದೆಗಳಿಗೆ ಅರ್ಜಿ
ಸಲ್ಲಿಸಲು ಕೇವಲ ಎಸ್‌ಎಸ್‌ಎಲ್‌ಸಿ ಅಥವಾ 10ನೇ ಕ್ಲಾಸ್ ಪಾಸಾಗಿದ್ದರೆ ಸಾಕು. ಈ ತರಗತಿಯ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ
ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಇವುಗಳು ಕೇಂದ್ರ ಸರ್ಕಾರಿ ಹುದ್ದೆಯಾಗಿದ್ದು, ಯಾವುದೇ ಪರೀಕ್ಷೆ ನಡೆಸಲಾಗುವುದಿಲ್ಲ. ಆಕರ್ಷಕ ಸಂಬಳ, ಸೌಲಭ್ಯಗಳೆಲ್ಲವೂ ಇರುತ್ತದೆ. ಇದು ಅತ್ಯಂತ ಸುಲಭದಲ್ಲಿ
ಗಳಿಸಬಹುದಾದ ಉದ್ಯೋಗಾವಕಾಶ.

Social Icons