ಮಂಗಳೂರು: ಗ್ರಾಮೀಣ ಭಾಗದಲ್ಲಿ ಅನೇಕ ಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಡಾ. ಶಿವಾನಂದ ಪ್ರಭು ಹೇಳಿದರು.
ಅವರು ದುರ್ಗಾಸಂಜೀವಿನಿ ಮಣಿಪಾಲ್ ಅಸ್ಪತ್ರೆ ಕಟೀಲು, ಶ್ರೀ ಕೊಡಮಣಿತ್ತಾಯ ಅಂಗ್ಲ ಮಾದ್ಯಮ ಶಾಲೆ ಶಿಬರೂರು, ಯುವಕ ಮಂಡಲ ಮತ್ತು ಮಹಿಳಾ ಮಂಡಲ ದೇಲಂತಬೆಟ್ಟು, ಕುಂಭಕಠಿನಿ ಎಜುಕೇಶನ್ ಟ್ರಸ್ಟ್ ಶಿಬರೂರು, ದ.ಕ ಹಿರಿಯ ಪ್ರಾರ್ಥಮಿಕ ಶಾಲೆ ಶಿಬರೂರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕಾಟಿಪಳ್ಳ ಇದರ ಸಹಯೋಗದಲ್ಲಿ
ಶಿಬರೂರು ಅಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರದಲ್ಲಿ ಮಾತನಾಡಿದರು.
ಶಿಬರೂರು ಅಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಸಣಾ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಡಾ. ನಿತ್ಯಾನಂದ ಚೌಟ, ಡಾ ಕೌಶಿಕ್, ಡಾ ಕಿರ್ತನ್ ರಾವ್, ಆರೋಗ್ಯ ಇಲಾಖೆಯ ಸುಜಾತ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಯುವಕ ಮಂಡಲ ಅಧ್ಯಕ್ಷ ಗಿರೀಶ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಸುಪ್ರಜಾ ಸುಬ್ರಮಣ್ಯ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕಟೀಲಿ ದುರ್ಗಾಸಂಜೀವಿನಿ ಅಸ್ಪತ್ರೆಯ ನಿತೆಶ್ ಶೆಟ್ಟಿ ಎಕ್ಕಾರು ಪ್ರಸ್ತಾವನೆಗೈದರು, ಯುವಕ ಮಂಡಲದ ಸುದರ್ಶನ್ ಆಚಾರ್ಯ ಸ್ವಾಗತಿಸಿ, ಕುಂಭಕಠಿನಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ವಿಜೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭ ತಜ್ಞ ವೈದ್ಯರುಗಳಿಂದ ವಿವಿಧ ವಿಭಾಗಗಳ ಆರೋಗ್ಯ ತಪಾಸಣೆ ನಡೆದಿದ್ದು ನೂರಾರು ಮಂದಿ ಇದರ ಪ್ರಯೋಜನ ಪಡೆದರು.

Social Icons