ಮರ್ಯಾದೆ ಬಿಟ್ಟ ರಾಜಕಾರಣಿಗಳ ಬಗ್ಗೆ RSS ಕೆಂಡಾಮಂಡಲ: ಪ್ರತಿಪಕ್ಷಗಳ ವಿರುದ್ಧ ದ್ವೇಷ ಭಾಷಣದ ಬಗ್ಗೆ ಮೋಹನ್ ಭಾಗ್ವತ್ ಕಿಡಿ
ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾದ ಭಾಷೆ, ದ್ವೇಷ ಭಾಷಣ ಹಾಗೂ ರಾಜಕಾರಣಿಗಳ ಹದ್ದುಮೀರಿದ ವರ್ತನೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನಾಗ್ಪುರದಲ್ಲಿ ಆರ್‌ಎಸ್‌ಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಜವಾದ ಸೇವಕ ಅಹಂಕಾರಿಯಾಗಲು ಸಾಧ್ಯವಿಲ್ಲ ಹಾಗೂ ಇತರರಿಗೆ ನೋವು ಮಾಡದೆ ತನ್ನ ಕರ್ತವ್ಯ ನಿಭಾಯಿಸುತ್ತಾನೆ ಎಂದು ಮೋಹನ ಭಾಗ್ವತ್ ಹೇಳಿದ್ದಾರೆ.
Social Icons