ಮಳೆಯಿಂದ ಜೀವ ಹಾನಿಯಾಗದಂತೆ ಅಧಿಕಾರಿಗಳು ಕ್ರಮವಹಿಸಿ: ಶಾಸಕ ರಾಜೇಶ್ ನಾಯ್ಕ್ Rajesh naik

 



ವರದಿ: ಕವಿತಾ ಕೆ ಮಾಣಿ


ಬಂಟ್ವಾಳ ತಾಲೂಕಿನಲ್ಲಿ ನೆರೆ‌ ಹಾಗೂ ಮಳೆಯಿಂದ ಜೀವಕ್ಕೆ ಹಾನಿಯಾಗದಂತೆ ಅಧಿಕಾರಿಗಳು ಸದಾ ಜಾಗೃತರಾಗಿರುವಂತೆ ಮತ್ತು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಾಜೇಶ್ ನ್ಯಾಕ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಸಾರ್ವಜನಿಕರಿಂದ ದೂರುಗಳು ಬರದಂತೆ ಕಾರ್ಯನಿರ್ವಹಿಸಲು ತಿಳಿಸಿದರು.

ಅವರು ಮಳೆ ವಿಪತ್ತು ನಿರ್ವಹಣೆ ಬಗ್ಗೆ  ತಾ.ಪಂ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕರೆದ  ತಾಲೂಕಿನ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮಕ್ಕಳಿಗೆ ಶಾಲೆಗೆ ತೆರಳುವ ವೇಳೆ ಮತ್ತು ಸಂಜೆ ಮನೆಗೆ ವಾಪಸು ಬರುವ ಸಮಯದಲ್ಲಿ ಬಸ್ ಗಳ ಕೊರತೆಯಿರುವ ಬಗ್ಗೆ ಮಕ್ಕಳಿಂದ ಮತ್ತು ಪೋಷಕರಿಂದ ದೂರುಗಳು ಬಂದಿದ್ದು, ಧರ್ಮಸ್ಥಳ ರೂಟ್ ಗಳಲ್ಲಿ ಶಾಲಾ ಮಕ್ಕಳು ಪುಟ್ ಪಾತ್ ನಲ್ಲಿ ಜೀವವನ್ನು ಕೈಯಲ್ಲಿಟ್ಟು ನೇತಾಡಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಕೆಲವು ಕಡೆಗಳಲ್ಲಿ ಬಸ್ ಗಳನ್ನು ನಿಲ್ಲಿಸುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹಾಗಾಗಿ ಹೆಚ್ಚುವರಿ ಬಸ್ ಗಳನ್ನು ಓಡಾಟ ಮಾಡುವುದು ಮತ್ತು ಶಾಲಾ ಮಕ್ಕಳಿಗೆ ಶಾಲೆಗೆ ತೆರಳುವ ವೇಳೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಂದರ್ಭ ವೇದಿಕೆಯಲ್ಲಿ ತಹಶಿಲ್ದಾರ್ ಅರ್ಚನಾ ಭಟ್, ತಾಪಂ.ಇ.ಒ ಮಹೇಶ್ ಹೊಳ್ಳ, ಉಪಸ್ಥಿತರಿದ್ದರು