ವರದಿ:
ಕವಿತಾ ಕೆ ಮಾಣಿ
ಪ್ರಭು
ಶ್ರೀ ರಾಮಚಂದ್ರನ ಬಗ್ಗೆ ಪ್ರೊ. ಭಗವಾನ್ ವಿವಾದಿತ ಹೇಳಿಕೆ ವಿಚಾರವಾಗಿ ಭಗವಾನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತ ಹರಿಪ್ರಸಾದ್ ಶೆಟ್ಟಿ ದೂರು ನೀಡಿದ್ದಾರೆ.
ಮಾಧ್ಯಮದೊಂದಿಗೆ
ಮಾತನಾಡಿದ ಅವರು, ಭಗವಾನ್ ಹೇಳಿಕೆ ಹಿಂದೂ ಸಮಾಜವನ್ನು ಕೆರಳಿಸುವಂತೆ ಮಾಡಿದೆ. ಇದೇ ಭಗವಾನ್ ಹೇಳಿಕೆ ಬೇರೆ ಸಮುದಾಯದವರ ದೇವರುಗಳು ಬಗ್ಗೆ ಹೇಳಿದ್ದಲ್ಲಿ ಏನಾಗುತ್ತಿತ್ತು..? ಭಗವಾನ್ ಅವರನ್ನು ಪೀಸ್ ಪೀಸ್ ಮಾಡುತ್ತಿದ್ದರು. ಆದ್ರೆ ಹಿಂದೂ ಸಮಾಜದವರಾದ ನಾವುಗಳು ಹಾಗೆ ಮಾಡಲ್ಲ. ನಮಗೆ ನಮ್ಮದೇ ಆದ ಸಂಸ್ಕ್ರತಿ ಇದೆ.
ಹಾಗಾಗಿ ನಾವು ಭಗವಾನ್ ವಿರುದ್ಧ ಕಠಿಣ ಕಾನೂನು ಕ್ರಮಗೈಗೊಳ್ಳಲು ಆಗ್ರಹಿಸುತ್ತಿದ್ದೇನೆ ಎಂದರು.

Social Icons