PUTTURU: ಕಾಡಾನೆಗಳನ್ನು ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಬಾರೆ ತಂಡದ ವ್ಯಕ್ತಿಗೆ ಗಾಯ



ವರದಿ: ಕವಿತಾ ಕೆ ಮಾಣಿ


ಪುತ್ತೂರು; ಕಾಡನೆಗಳನ್ನು ಬಂದ ದಾರಿಗೆ ಅಟ್ಟಿಸುವ ವೇಳೆ ಪಟಾಕಿ ಸಿಡಿದು ದುಂಬಾರೆಯ ಆನೆ ಸಲಹಾ ತರಬೇತಿ ಕೇಂದ್ರದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿ ಎಂಬಲ್ಲಿ ನಡೆದಿದೆ. 

 ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಬಾರ್ತೋಳಿಯಲ್ಲಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳೆರಡು ಪಕ್ಕದ ಅಂದ್ರಗೇರಿ ಕಾಡು ಪ್ರದೇಶದಲ್ಲಿದ್ದು ಅಲ್ಲಿನ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಆನೆಯನ್ನು ಬಂದ ದಾರಿಯಲ್ಲೆ ಸುರಕ್ಷಿತವಾಗಿ ಕಳುಹಿಸುವಲ್ಲಿ ದುಬಾರೆ ಆನೆ ಸಲಹಾ ಸಮಿತಿಯವರು ಪಟಾಕಿ ಸಿಡಿಸಿ ಆನೆಯನ್ನು ಬೆನ್ನಟ್ಟುತ್ತಿದ್ದರು.



 ಈ ವೇಳೆ ದುಬಾರೆಯ ಆನೆ ತರಬೇತಿ ಪರಿಣಿತ ವ್ಯಕ್ತಿಯೊಬ್ಬರು ಪಟಾಕಿಗೆ ಬೆಂಕಿಕೊಟ್ಟು ಬಿಸಾಡುವ ವೇಳೆ ಪಕ್ಕದ ಗುಂಡಿಯಲ್ಲಿ ಮಲಗಿದ್ದ ಆನೆ ಏಕಾಏಕಿ ಎದ್ದಾಗ ಗಲಿಬಿಲಿಗೊಂಡ ವ್ಯಕ್ತಿ ತಾನು ಬಿಸಾಡಿದ ಪಟಾಕಿ ಮರಕ್ಕೆ ತಾಗಿ ತನ್ನ ಕಾಲಿಗೆ ಬಿದ್ದು ಸ್ಪೋಟಗೊಂಡು ಗಾಯಗೊಂಡಿದ್ದ.  ತಕ್ಷಣ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.