ಅವಧಿ ಮುಗಿದ ಕೂಡಲೇ ಹುದ್ದೆಯಿಂದ ಬಿಡುಗಡೆಗೆ ಮನವಿ: ಮಾದರಿಯಾಗಬಲ್ಲರೇ Puttur, Vitla-Uppinangady ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು?

ಯಾವುದೇ ಹುದ್ದೆ, ಪದವಿ ಇರಲಿ ಅಧಿಕಾರಕ್ಕೆ ಅಂಟಿಕೊಂಡು ಇರುವವರೇ ಜಾಸ್ತಿ. ಅವಧಿ ಮುಗಿದರೂ ಕೆಳಗಿಳಿಯಲು ಕೇಳದ, ಇಳಿಸಿದರೆ ಅಸಮಾಧಾನಗೊಂಡು ನಾನಾ ಕಸರತ್ತು ಮಾಡುವ ಅದೆಷ್ಟೋ ನಾಯಕರನ್ನು ಕಂಡಿದ್ದೇವೆ. ಇದು ಯಾವುದೇ ಸಂಘ,  ಸಂಸ್ಥೆ, ರಾಜಕೀಯ ಪಕ್ಷಗಳಿಗೂ ಹೊರತಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ಅವಧಿ ಮೂರು ವರ್ಷ. ಈ ಅವಧಿಯಲ್ಲಿ ಸಿದ್ದಾಂತಕ್ಕೆ ಸರಿಯಾಗಿ ಪಕ್ಷದ ಎಲ್ಲಾ ಸಂಘಟನಾತ್ಮ ಚಟುವಟಿಕೆಯಲ್ಲಿ ಭಾಗವಹಿಸಿ ಹುದ್ದೆಗೆ ನ್ಯಾಯ ಕೊಟ್ಟಿದ್ದೆವೆ.  ಹಾಗಾಗಿ ನಮ್ಮನ್ಬು ಹುದ್ದೆಯಿಂದ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ ಎನ್ನುತ್ತಾ ಸುದ್ದಿಗೋಷ್ಠಿ ನಡೆಸಿ ಪುತ್ತೂರು, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಚ್ಚರಿ ಮೂಡಿಸಿದ್ದಾರೆ. 



ಹೌದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮತ್ತೂರು ವಿಧಾನಸಭಾ ಕ್ಷೇತ್ರದ ನಮ್ಮ ಎರಡು ಬ್ಲಾಕ್‍ಗಳಾದ ಪುತ್ತೂರು ಬ್ಲಾಕ್ ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಇದೀಗ ಇವರ ಮೂರು ವರ್ಷಗಳ ಅಧಿಕಾರಾವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. 

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪುತ್ರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಮ್ ಕೆ.ಬಿ., ಪಕ್ಷ ನಮಗೆ ಮೂರು ವರ್ಷದ ಅವಕಾಶ ಕೊಟ್ಟಿದೆ. ನಮ್ಮ ಅವಧಿ ಮೂರು ವರ್ಷ. ಈ ಅವಧಿಯಲ್ಲಿ ಸಿದ್ದಾಂತಕ್ಕೆ ಸರಿಯಾಗಿ ಪಕ್ಷದ ಎಲ್ಲಾ ಸಂಘಟನಾತ್ಮ ಚಟುವಟಿಕೆಯಲ್ಲಿ ಭಾಗವಹಿಸಿ ಹುದ್ದೆಗೆ ನ್ಯಾಯ ಕೊಟ್ಟಿದ್ದೆವೆ. ಹಾಗಾಗಿ ನಮ್ಮನ್ಬು ಹುದ್ದೆಯಿಂದ ಬಿಡಬೇಕೆಂದು ನಮ್ಮ ಹಿರಿಯರಿಗೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ದೇಶದ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಮತ್ತೂರು ವಿಧಾನ ಸಭಾ ಕ್ಷೇತ್ರದ ನಮ್ಮ ಎರಡು ಬ್ಲಾಕ್ ಗಳಾದ ಮತ್ತೂರು ಬ್ಲಾಕ್ ಮತ್ತು ಉಪ್ಪಿನಂಗಡಿ ಬ್ಲಾಕ್ ನಿಗದಿತ ಅವಧಿಯಂದ ವರ್ಷ ಪೂರ್ಣಗೊಂಡಿರುತ್ತದೆ. ನಾವಿಬ್ಬರು ಈ ಎರಡು ಬ್ಲಾಕ್‍ಗಳ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಸಂತೃಪ್ತಿ ನಮಗಿದೆ. ನಮ್ಮ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕಾರ್ಯಕರ್ತರನ್ನು ಸಂಘಟಿಸಿದ್ದೇವೆ. ಪಕ್ಷದ ವರಿಷ್ಠರ ಆದೇಶದಂತೆ ಶಾಲ ಕಾಲಕ್ಕೆ ನಿರ್ವಹಿಸಬೇಕಾದ ಕಾರ್ಯಕ್ರಮಗಳನ್ನು ಅಗತ್ಯ ವಿದ್ದರೆ ಪ್ರತಿಭಟನಾ ಸಭೆಗಳನ್ನು ನಡೆಸಿ ಪಕ್ಷವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿದ್ದೇವೆ. ಕಳೆದ ವಿಧಾನ ಸಭಾ ಚುನಾವಣಾ ಸಂಧರ್ಭದಲ್ಲಿ ನಾವಿಬ್ಬರೂ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಆಕಾಂಕ್ಷಿಗಳಾಗಿದ್ದೆವು. ಆದರೂ ಪಕ್ಷದ ಹೈಕಮಾಂಡ್ ನಿರ್ಧಾರದಂತೆ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ಕಲ್ಲಿಸಿತು. ಈ ಸಂಧರ್ಭದಲ್ಲಿ ಹೈಕಮಾಂಡ್ ವಿರ್ಧಾರಕ್ಕೆ ಬದ್ದರಾಗಿ ನಮ್ಮ ಕರ್ತವ್ಯಕ್ಕೆ ಎಳ್ಳಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ, ಎಲ್ಲೂ ಭಿನ್ನಾಭಿಪ್ರಾಯ ಬಾರದ ರೀತಿಯಲ್ಲಿ ಅಹರ್ನಿಶಿ ಶ್ರಮಿಸಿದ್ದೇವೆ. ನಮ್ಮ ಶ್ರಮದ ಫಲಶೃತಿಯಾಗಿ ಅಶೋಕ್ ಕುಮಾರ್ ರೈ ಯವರು ಶಾಸಕರಾಗಿ ಆರಿಸಿ ಬಂದರು ನಮ್ಮಿ ಅಧ್ಯಕ್ಷೀಯ ಅವಧಿಯಲ್ಲಿ ಓರ್ವ ಶಾಸಕರನ್ನು ಪಡೆದ ಧನ್ಯತಾ ಭಾವ ನಮಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಬೂತ್ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತೊಡಗಿಸಿಕೊಂಡು ಮತಯಾಚನೆ ಮಾಡಿದ್ದೇವೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೂಡಾ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಒಟ್ಟಾರೆ ಹೇಳುವುದಾದರೆ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪಕ್ಷಕ್ಕೆ ಎಳಷ್ಟೂ ಚ್ಯುತಿ ಬಾರದು ಹಾಗೆ  ಕಾರ್ಯನಿರ್ವಹಿಸಿದ್ದೇವೆ ಎಂಬ ಆತ್ಮ ತೃಪ್ತಿ ನಮಗಿದೆ ಎಂದ ಅವರು ಇವತ್ತು ಮೂರು ವರ್ಷ ಅವಧಿ ಪೂರ್ಣ ಆಗಿದೆ. ನಮ್ಮ ಅಪೇಕ್ಷೆ ಯಾವುದು ಇಲ್ಲ. ಇನ್ನು ಯುವಕರಿಗೆ ಹೊಸಬರಿಗೆ ಅವಕಾಶ ನೀಡಬೇಕು. ಈ ನಿಟ್ಡಿನಲ್ಲಿ ನಮ್ಮನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರೂ ದಕ್ಷವಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಇಬ್ಬರ ನಡೆಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇಂತಹ ನಡೆ ಎಲ್ಲರಿಗೂ ಮಾದರಿಯಾದರೆ ಎಲ್ಲೆಡೆ ಹೊಸ ಮುಖಗಳ ಬೆಳವಣಿಗೆಗೆ ಅವಕಾಶ ಸಿಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.