ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ - Prime Minister Modi

 


ನವದೆಹಲಿ:ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆಯಾಗಿದ್ದು, ಪ್ರಧಾನಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆತಿರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ ಮಾಡಿದರು.

ಎನ್​ಡಿಎ ಕೂಟದ ನಾಯಕರಾಗಿರುವ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

 

 

ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

 

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು:

 

ರಾಜನಾಥ್​ ಸಿಂಗ್: ರಾಜನಾಥ್ ಸಿಂಗ್ ​ ಪ್ರಥಮವಾಗಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಈಶ್ವರನ ಹೆಸರಿನಲ್ಲಿ ಅವರು ಪ್ರತಿಜ್ಞೆಯನ್ನು ಪಡೆದರು.

 

ಅಮಿತ್​ ಶಾ: ಈಶ್ವರನ ಹೆಸರಿನಲ್ಲಿ ಅಮಿತ್​ ಶಾ ಅವರು ಪ್ರಮಾಣವಚನ ಮಾಡಿದರು.

 

ನಿತಿನ್​ ಗಡ್ಕರಿ: ಈಶ್ವರನ ಹೆಸರಿನಲ್ಲಿ ನಿತಿನ್​ ಗಡ್ಕರಿ ಅವರು ಪ್ರತಿಜ್ಞೆ ಸ್ವೀಕರಿಸಿದರು.

 

ಜೆಪಿ ನಡ್ಡಾ: ಈಶ್ವರನ ಹೆಸರಿನಲ್ಲಿ ಜಗತ್​ಪ್ರಕಾಶ್​ ನಡ್ಡಾ ಅವರು ಪ್ರತಿಜ್ಞೆ ಪಡೆದರು.

 

ಶಿವರಾಜ್​ ಸಿಂಗ್​ ಚೌಹಾಣ್​: ಈಶ್ವರನ ಹೆಸರಿನಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಪ್ರತಿಜ್ಞೆ ಪಡೆದರು.

 

ನಿರ್ಮಲಾ ಸೀತಾರಾಮನ್​: ದೇವರ ಹೆಸರಿನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಪ್ರತಿಜ್ಞೆ ಪಡೆದರು.

 

ಡಾ.ಎಸ್​. ಜೈಶಂಕರ್​: ದೇವರ ಹೆಸರಿನಲ್ಲಿ ಡಾ.ಎಸ್​. ಜೈಶಂಕರ್​ ಅವರು ಪ್ರತಿಜ್ಞೆ ಮಾಡಿದರು.

 

ಮನೋಹರ್​ಲಾಲ್​ ಖಟ್ಟರ್​: ಈಶ್ವರನ ಹೆಸರಿನಲ್ಲಿ ಮನೋಹರ್​ಲಾಲ್​ ಖಟ್ಟರ್​ ಪ್ರತಿಜ್ಞೆ ಸ್ವೀಕರಿಸಿದರು.

 

ಹೆಚ್​.ಡಿ.ಕುಮಾರಸ್ವಾಮಿ: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಕುಮಾರಸ್ವಾಮಿ.

 

ಪಿಯೂಷ್​ ಗೋಯಲ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಪಿಯೂಷ್​ ಗೋಯಲ್​

 

ಧರ್ಮೇಂದ್ರ ಪ್ರಧಾನ್​: ಈಶ್ವರನ ಹೆಸರಿನಲ್ಲಿ ಪ್ರಮಾಣ

 

ಜೀತನ್​ರಾಮ್​ ಮಾಂಜಿ: ಸತ್ಯ, ನಿಷ್ಠೆಯ ಮೇಲೆ ಪ್ರತಿಜ್ಞೆ

 

ರಾಜೀವ್​ ರಂಜನ್ ಸಿಂಗ್​: ಸತ್ಯ, ನಿಷ್ಠೆಯ ಮೇಲೆ ಪ್ರಮಾಣ


ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದವರು:


ರಾಜನಾಥ್ ಸಿಂಗ್

ಅಮಿತ್ ಶಾ

ನಿತಿನ್ ಜೈರಾಮ್ ಗಡ್ಕರಿ

ಜಗತ್ ಪ್ರಕಾಶ್ ನಡ್ಡಾ

ಶಿವರಾಜ್ ಸಿಂಗ್ ಚೌಹಾಣ್

ನಿರ್ಮಲಾ ಸೀತಾರಾಮನ್

ಸುಬ್ರಹ್ಮಣ್ಯಂ ಜೈಶಂಕರ್

ಮನೋಹರ್ ಲಾಲ್ ಖಟ್ಟರ್​

ಎಚ್ ಡಿ ಕುಮಾರಸ್ವಾಮಿ

ಪಿಯೂಷ್ ಗೋಯಲ್​

ಧರ್ಮೇಂದ್ರ ಪ್ರಧಾನ್

ಜಿತನ್ ರಾಮ್ ಮಾಂಝಿ

ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್

ಸರ್ಬಾನಂದ ಸೋನೋವಾಲ್

ವೀರೇಂದ್ರ ಕುಮಾರ್

ಕಿಂಜರಾಪುರ ರಾಮಮೋಹನ ನಾಯ್ಡು

ಪ್ರಲ್ಹಾದ್ ಜೋಶಿ

ಜುಯಲ್ ಓರಂ

ಗಿರಿರಾಜ್ ಸಿಂಗ್

ಅಶ್ವಿನಿ ವೈಷ್ಣವ್

ಜ್ಯೋತಿರಾದಿತ್ಯ ಎಂ. ಸಿಂಧಿಯಾ

ಭೂಪೇಂದರ್ ಯಾದವ್

ಗಜೇಂದ್ರ ಸಿಂಗ್ ಶೇಖಾವತ್

ಕಿರೆನ್ ರಿಜಿಜು

ಹರ್ದೀಪ್ ಸಿಂಗ್ ಪುರಿ

ಮನ್ಸುಖ್ ಮಾಂಡವಿಯಾ

ಜಿ ಕಿಶನ್ ರೆಡ್ಡಿ

ಚಿರಾಗ್ ಪಾಸ್ವಾನ್

ಸಿ ಆರ್ ಪಾಟೀಲ್ ಅವರು ಭಾನುವಾರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಸಚಿವರು( ಸ್ವತಂತ್ರ ನಿರ್ವಹಣೆ):


ರಾವ್ ಇಂದರ್‌ಜಿತ್ ಸಿಂಗ್

ಜಿತೇಂದ್ರ ಸಿಂಗ್

ಅರ್ಜುನ್ ರಾಮ್ ಮೇಘವಾಲ್

ಜಾಧವ್ ಪ್ರತಾಪ್ರಾವ್ ಗಣಪತ್ರಾವ್

ಜಯಂತ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿದರು.