POCSO ಸಂತ್ರಸ್ತ ಬಾಲಕಿಯನ್ನೇ ಮದುವೆಯಾಗಲು ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್

 


ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಹೈಕೋರ್ಟ್ ಆರೋಪಿಗೆ ಸಂತ್ರಸ್ತ ಯುವತಿಯನ್ನು ಮದುವೆಯಾಗುವ ಸಲುವಾಗಿ ಮಧ್ಯಂತರ ಜಾಮೀನು ನೀಡಿದ ಅಪರೂಪದ ಪ್ರಕರಣ ನಡೆದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯೊರ್ವಳು ಯುವಕನೋರ್ವನಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಯುವಕನ ವಿರದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಜೈಲು ಸೇರಿದ್ದನು. ಈ ನಡುವೆ ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಂತ್ರಸ್ತ ಯುವತಿಗೆ 18 ವರ್ಷವಾಗಿದ್ದು, ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಅಲ್ಲದೇ ಹಿಂದಿನ ಘಟನೆಯ ಬಗ್ಗೆ ಮಗುವಿಗೆ ಏನೂ ಗೊತ್ತಿಲ್ಲ. ಪ್ರಕರಣದಿಂದಾಗಿ ಮಗುವಿನ ಭವಿಷ್ಯ ಹಾಳಾಗಬಾರದು. ಅಲ್ಲದೇ ಮಗು ಮುಂದಿನ ದಿನಗಳಲ್ಲಿ ಅಪಮಾನಕ್ಕೆ ಒಳಗಾಗಬಾರದು. ಈ ಹಿನ್ನೆಲೆಯಲ್ಲಿ 17 ದಿನಗಳ ಮಧ್ಯಂತರ ಜಾಮೀನು ನೀಡಿ, ಜುಲೈ 3ರಂದು ಜೈಲಿಗೆ ಮರಳಲು ಸೂಚಿಸಿ ಆದೇಶಿಸಿದೆ.

ಯುವತಿಯನ್ನು ಮದುವೆಗೆ ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಅಲ್ಲದೇ ಜಾಮೀನಿನ ಸಂದರ್ಭದಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅದನ್ನು ಉಲ್ಲಂಘಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.