PANJA : ಮಣ್ಣಿನಡಿ ಸಿಲುಕಿದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರು

 

 


ವರದಿ:ಪ್ರಕಾಶ್ ಕೋಡಿಂಬಾಳ

ಸುಳ್ಯ: ಬಾವಿಯ ರಿಂಗ್ ಬದಿಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಮಣ್ಣಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿ ಕೂದಲೆಳೆ ಅಂತರದಲ್ಲಿ ಪಾರದ ಘಟನೆ ಜೂನ್ 29ರಂದು ಸಂಜೆ ಪಂಜದಿಂದ ವರದಿಯಾಗಿದೆ.

 

 

ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಯ ರಿಂಗ್ ಹೊರಗಿನ ಬದಿಗೆ ಕೇರಳದ ರಿಂಗ್ ಕಾರ್ಮಿಕರು ಮಣ್ಣು ತುಂಬುವ ಕೆಲಸ ಮಾಡುತ್ತಿದ್ದು ವೇಳೆ ರಿಂಗ್ ಬದಿಯ ಮಣ್ಣು ಒಮ್ಮಿಂದೊಮ್ಮೆಲೆ ಕೆಳಕ್ಕೆ ಕುಸಿದು ಓರ್ವ ಕಾರ್ಮಿಕ ಮಣ್ಣಿನಲ್ಲಿ ಹೂತು ಹೋಗಿ ಕುತ್ತಿಗೆಯಿಂದ ಮೇಲೆ ಭಾಗ ಮಾತ್ರ ಮೇಲಕ್ಕೆ ಉಳಿದಿತ್ತು.

 

ತಕ್ಷಣ ಅಲ್ಲಿದ್ದವರು ಮತ್ತು ಜೇಸಿಬಿ ಸಹಾಯದಿಂದ ಅವರ ಮೇಲಿಂದ ಮಣ್ಣು ತೆಗೆದು ಅವರನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು. ಬಳಿಕ ಅಂಬ್ಯುಲೆನ್ಸ್ ನಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆ ಕರೆತಂದು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಯಿತು.