ಪದ್ಮನೂರು ಶಾಲೆಯಲ್ಲಿ ಬ್ಯಾಗ್ ವಿತರಣೆ

 



 ಕಿನ್ನಿಗೋಳಿ:  ಸರಕಾರಿ ಶಾಲೆ ಎಂಬ ಕೀಳರಿಮೆ ಸಲ್ಲದು ಸರಕಾರಿ ಶಾಲೆಯಲ್ಲಿ ಕಲಿತವರು ಇಂದು ದೊಡ್ದ ದೊಡ್ದ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು  ಉದ್ಯಮಿ ಪೃಥ್ವಿರಾಜ ಆಚಾರ್ಯ  ಹೇಳಿದರು. ಅವರು  ಕಿನ್ನಿಗೋಳಿ ಸಮೀಪದ ಪದ್ಮನೂರು ಸರಕಾರಿ ಶಾಲೆಯಲ್ಲಿ  ಮಕ್ಕಳಿಗೆ ಬ್ಯಾಗ್ ಲೇಖನ ಸಾಮಾಗ್ರಿ ಯನ್ನು ನೀಡುವ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು. 

 ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಶಂಕರ ಆಚಾರ್ಯ, ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿಯ ಅಧ್ಯಕ್ಷ ಶೇಖರ ಪೂಜಾರಿ,  ದಾನಿಗಳಾದ  ಅನಿತಾ ಪೃಥ್ವಿರಾಜ ಆಚಾರ್ಯ, ಅನ್ಯ ಆಚಾರ್ಯ, ಅನ್ವಯ್ ಆಚಾರ್ಯ , ಶಾಲಾ ಮುಖ್ಯ ಶಿಕ್ಷಕಿ  ಐರಿನ್, ಉಪಸ್ಥಿರಿದ್ದರು. ಪೃಥ್ವಿರಾಜ್ ಆಚಾರ್ಯ ಹಾಗೂ ಅವರ ಕುಟುಂಬದವರಿAದ  50,000 ರೂಪಾಯಿ ಮೌಲ್ಯದ ಉಚಿತ ಶಾಲಾ ಬ್ಯಾಗ್ , ಲೇಖನಿ ಸಾಮಾಗ್ರಿಗಳನ್ನಿಡಲು ಪೌಚ್ ಮಕ್ಕಳಿಗೆ ನೀಡಿದರು .  ಶಾಲೆಯ ಕಚೇರಿಗೆ  ಎಪ್ಸನ್  ಪ್ರಿಂಟರ್ ಶಾಲೆಗೆ ಹಸ್ತಾಂತರಿಸಿದರು. ಸಹಶಿಕ್ಷಕಿ ಪ್ರಜ್ವಲಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.