ವರದಿ: ಹರೀಶ್
ಮಾಂಬಾಡಿ
ಬಂಟ್ವಾಳ:ಯಕ್ಷ
ಧ್ರುವ ಪಟ್ಲ ಫೌಂಡೇಶನ್ ಇದರ ಯಕ್ಷ ಶಿಕ್ಷಣದ ಪ್ರಾರಂಭವು ಈ ದಿನ ಬೊಂಡಾಲ
ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಜರಗಿತು.
ಬಂಟ್ವಾಳ
ಘಟಕದ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್, ಯಕ್ಷಗಾನ ಕಲಾವಿದ ಸರಪ್ಪಾಡಿ ಅಶೋಕ್ ಶೆಟ್ಟಿ, ಯಕ್ಷ ಗುರುಗಳಾದ ಓಂ ಪ್ರಕಾಶ್, ಘಟಕದ
ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ, ಮುಖ್ಯ್ಯೊಪಾಧ್ಯಯರಾದ ಕಮಲಾಕ್ಷ, ಶಿಕ್ಷಕ
ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.
ಮುಂಬಯಿಯ
ಛತ್ರಪತಿ ಶಿವಾಜಿ ಮಹರಾಜ್ ವಸ್ತುಸಂಗ್ರಹಾಲಯ ಒರಿಗಾಮಿ ಕಲಾಕೃತಿಗಳನ್ನೊಳಗೊಂಡ “ಒರಿಗಮಿ ಬಸ್” ಇಂದು ಬಂಟ್ವಾಳ ತಾಲೂಕಿಗೆ ಆಗಮಿಸಿದ್ದು, ಬಿ.ಸಿ.ರೋಡಿನ
ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು.ಒರಿಗಾಮಿ ಒಂದು ರೀತಿಯ ಕಾಗದದ ಕಲೆಯಾಗಿದ್ದು ಅದು ಜಪಾನ್‌ನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ‘ಕಾಗದವನ್ನು ವಿಧವಿಧ ರೀತಿಯಲ್ಲಿ ಮಡಚಿ ಅದರಲ್ಲಿ ವಿಶಿಷ್ಟವಾದ ಆಕಾರಗಳು ಮತ್ತು ಶಿಲ್ಪಗಳನ್ನು ರಚಿಸುವುದು ಈ ಒರಿಗಮಿ ಕಲೆಯ
ವೈಶಿಷ್ಟ್ಯತೆ. ಈ ಒರಿಗಮಿ ಬಸ್ಸಿನಲ್ಲಿ
ಗಣಿತ, ವಾಸ್ತುಶಿಲ್ಪ, ಇಂಜಿನಿಯರಿಂಗ್ ಸಹಿತ ಒರಿಗಮಿ ಕಲೆಯ ವಿವಿಧ ಸಾಧ್ಯತೆಗಳನ್ನು ತಿಳಿಸುವ ಪ್ರಯತ್ನ ನಡೆಸಲಾಗಿದೆ.


Social Icons