ಮಂಗಳೂರು: ನೇಪಾಲದ
16 ವರ್ಷದ ಯುವತಿ ಮಂಗಳೂರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ತೊಕ್ಕೊಟ್ಟುವಿನ ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ
ಈ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ನೇಪಾಲದಿಂದ ಕಳೆದ ತಿಂಗಳಷ್ಟೆ ಮಂಗಳೂರಿಗೆ ಬಂದಿದ್ದಳು.
ತೊಕ್ಕೊಟ್ಟುನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು 4 ಮಕ್ಕಳೊಂದಿಗೆ ಚೆಂಬುಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದದ್ದರು. ರಾಮ್ ಶರಣ್ ಅವರ ಎರಡನೇ ಮಗಳಾದ ಈಕೆ ನೇಪಾಳದಲ್ಲಿ 8 ನೇ ತರಗತಿ ಓದುತ್ತಿದ್ದಳು. ಆಕೆಯನ್ನು ಮಂಗಳೂರಲ್ಲೇ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು.
ಆದರೆ ಈಕೆ ಶನಿವಾರ ಮಧ್ಯಾಹ್ನ ಬಾಡಿಗೆ ಮನೆಯಲ್ಲಿ
ಆತ್ಮಹತ್ಯೆಗೆ ಶರಣಾಗಿದ್ದಾಳೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಪಾಲದಲ್ಲಿ ಇರಲು ಇಷ್ಟವಿತ್ತು!
ಈಕೆಗೆ ನೇಪಾಲದಲ್ಲಿ ಓದುವ ಇಚ್ಚೆಯಿತ್ತು. ಈಕೆಯ
ಹೆತ್ತವರು ಆಕೆಯನ್ನು ಒತ್ತಾಯಪೂರ್ವಕವಾಗಿ ಮಂಗಳೂರಿಗೆ ಕರೆ ತಂದಿದ್ದರು. ಆದರೆ ಈಕೆ ತಾನು ನೇಪಾಳದಲ್ಲೇ ಓದು ಮುಂದುವರಿಸೋದಾಗಿ ಹಠ ಹಿಡಿದಿದ್ದಳು. ಈಕೆಯ ಇಚ್ಚೆಯ ವಿರುದ್ದವಾಗಿ ಮಂಗಳೂರಿಗೆ
ಕರೆತಂದು ಶಾಲೆಗೆ ಹಾಕಲಾಗಿತ್ತು. ಆದರೆ ಇದರಿಂದ ಆಕೆ ಗೆ ಸಂತಸವಿರಲಿಲ್ಲ. ಇದರಿಂದ ನೊಂದ ಈಕೆ ಆತ್ಮಹತ್ಯೆಗೆ
ಶರಣಾಗಿದ್ದಾಳೆ
.jpeg)
Social Icons