MULKI: ರಾಷ್ಟ್ರೀಯ ಹೆದ್ದಾರಿ ಒಳಚರಂಡಿ ಅವ್ಯವಸ್ಥೆ; ಮನೆಗೆ ನುಗ್ಗಿದ ನೀರು

 



ಮುಲ್ಕಿ:  ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿಯಲ್ಲಿ ಕೃತಕ ನೆರೆ ಉಂಟಾಗಿ ಮುಲ್ಕಿ ಸಮೀಪದ ಕೋಲ್ನಾಡು ಬಳಿ ಹೆದ್ದಾರಿ ಬದಿಯ ಮನೆಯೊಳಗೆ ನೀರು ನುಗ್ಗಿದೆ. 


 ಹೆದ್ದಾರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ  ಜೆಸಿಬಿ ಮೂಲಕ ಹೆದ್ದಾರಿ ಬದಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಮಳೆ ನೀರು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಭಾರೀ ಮಳೆಗೆ ಕೋಲ್ನಾಡು ರಾಷ್ಟೀಯ ಹೆದ್ದಾರಿ ಬಳಿಯ ನಾರಾಯಣ ಪೂಜಾರಿ ಎಂಬವರ ಮನೆಗೆ ಮಳೆ ನೀರು ನುಗ್ಗಿದೆ