ವರದಿ: ಕವಿತಾ ಕೆ ಮಾಣಿ
ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿಯಲ್ಲಿ ಗಿಡ ನೆಡುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ವನಮಹೋತ್ಸವಕ್ಕೆ ಚಾಲನೆ ನೀಡಿದ್ರು.
ಬಳಿಕ ಮಾತನಾಡಿ ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಿಡಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆ ಬೇಲಿ ಗೊಬ್ಬರ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ ಮೂಡಬೇಕಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.
ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳುನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾಧ್ಯಂತ ಜಂಟಿಯಾಗಿ ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.
ಡಿವೈಡರ್ ಮಧ್ಯೆ ಹೂವಿನ ಗಿಡ
ರಸ್ತೆ ಮಧ್ಯೆ ಇರುವ ಡಿವೈಡರ್ ಗಳ ಮಧ್ಯೆ ವಿವಿಧ ತರದ ಹೂವಿನ ಗಿಡಗಳನ್ನು ನೆಟ್ಟು ರಸ್ತೆಯನ್ನು ಸೌಂದರ್ಯೀಕರಣ ಮಾಡಲಾಗುತ್ತದೆ. ಪುತ್ತೂರಿನಿಂದ ಉಪ್ಪಿನಂಗಡಿ ತನಕ ಹೂವಿನ ಗಿಡ ನೆಡಲಾಗುತ್ತದೆ. ಆಂದ್ರಪ್ರದೇಶದಿಂದ ತಂದಿರುವ ಕಾಗದ ಹೂವಿನ ಗಿಡಗಳೂ ಡಿವೈಡರ್ ಮಧ್ಯೆ ಕಂಗೊಳಿಸಲಿದೆ ಅದನ್ನು ಪೋಷಣೆ ಮಾಡುವ ಕೆಲಸವೂ ನಡೆಯಲಿದೆ ಎಂದು ಹೇಳಿದರು.
ಈಸಂದರ್ಭದಲ್ಲಿ ಅರಣ್ಯಾಧಿಕಾರಿ ಕಿರಣ್ ಬಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ , ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸೇರಿದಂತೆ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯಸಿಬಂದಿಗಳು, ರೈ ಚಾರಿಟೇಬಲ್ ಟ್ತಸ್ಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Social Icons