ಶಾಸಕರಿಂದ ಸೂಚನೆ: ಬಪ್ಪಳಿಗೆಯಲ್ಲಿ ಅಪಾಯಕಾರಿ ಮರಗಳ ತೆರವು

 



ವರದಿ : ಕವಿತಾ ಕೆ. ಮಾಣಿ

ಪುತ್ತೂರು: ಬಪ್ಪಳಿಗೆಯ ರಸ್ತೆಗಳ‌ ಬದಿಯಲ್ಲಿ ಅಪಾಯಕಾರಿ ಮರಗಳಿದ್ದು, ಕೂಡಲೇ ತೆರವು ಮಾಡುವಂತೆ ಶಾಸಕರು‌ ಸೂಚನೆ ನೀಡಿದ್ದಾರೆ. ಸೂಚನೆ ನೀಡಿದ 24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವು‌ಮಾಡಿದೆ.

 


ನಿನ್ನೆ ಬಪ್ಪಳಿಗೆಯಲ್ಲಿ‌ ಮರವೊಂದು ಗಾಳಿಗೆ ಉರುಳಿ ಬಿದ್ದು ಎಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಮರ ತೆರವು ಮಾಡದೇ ಇರುವ ವಿಚಾರಕ್ಕೆ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡಿದ್ದರು.

 


24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ತೆರವು‌ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಮರಗಳನ್ನು ತೆರವು‌ ಮಾಡಿದ್ದಾರೆ.‌ಹಲವು ವರ್ಷಗಳಿಂದ ಇಲ್ಲಿನ ಮರಗಳನ್ನು ತೆರವು ಮಾಡಲು ಇಲಾಖೆಗೆ ಮನವಿ ಮಾಡಿದ್ದರೂ ತೆರವು ಕಾರ್ಯಾಚರಣೆ ನಡೆದಿರಲಿಲ್ಲ. ಶಾಸಕರ ಭೇಟಿ ಬಳಿಕ ತೆರವು ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.