ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ತಪ್ಪಲಾರೆ ಮನೆ‌ಮನೆಗೆ ಹಕ್ಕ ಪತ್ರ ವಿತರಣೆ ಮಾಡಿಯೇ ಸಿದ್ದ: ಶಾಸಕ ಅಶೋಕ್ ಕುಮಾರ್ ರೈ - MLA ASHOK KUMAR

 



ವರದಿ: ಕವಿತಾ ಕೆಮಾಣಿ

 

ಪುತ್ತೂರು: ಮತ ಪ್ರಚಾರದ ಸಮಯದಲ್ಲಿ ನನ್ನ ಕ್ಷೇತ್ರದ ಜನರಿಗೆ ನಾನು ಕೊಟ್ಟ ಮಾತನ್ನು ಯಾವತ್ತೂ ತಪ್ಪಲಾರೆ ಎಂದು ಪುತ್ತೂರು ಶಾಸಕ ಅಶೊಕ್ ಕುಮಾರ್ ರೈ ಹೇಳಿದರು..

 

ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ಇಂದು ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. ಒಟ್ಟು  13000 ಅರ್ಜಿಗಳು ಇದೆ. ಇವೆಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಿಯೇ ಮಾಡುತ್ತೇವೆ. ನನ್ನ ಅರ್ಜಿ ಏನಾಗಬಹುದೋ ಎಂಬ ಭಯ ಯಾರಿಗೂ ಬೇಡ ಖಂಡಿತವಾಗಿಯೂ ನಿಮಗೆ ಹಕ್ಕುಪತ್ರ ಸಿಕ್ಕೇ ಸಿಗ್ತದೆ ಅನುಮಾನವೇ ಬೇಡ ಎಂದು ಹೇಳಿದರು.

 

ನಾನು ರಾಜಕೀಯಕ್ಕೆ ಬರುವ ಮೊದಲು ಅಕ್ರಮ ಸಕ್ರಮ ಮತ್ತು 94 ಸಿ ಮತ್ತು ಸಿಸಿ ಇದರಲ್ಲಿನ ಭೃಷ್ಟಾಚಾರತೆಯ ಬಗ್ಗೆ ಗೊತ್ತಿತ್ತು. ನಾನು ಶಾಸಕನಾದರೆ ಇವೆಲ್ಲವನ್ನೂ ಭೃಷ್ಟಾಚಾರವಿಲ್ಲದೆ ವಿಲೇವಾರಿಮಾಡುತ್ತಿದ್ದೆ ,ಬಡವರಿಗೆ ಸಹಾಯ ಮಾಡುತ್ತಿದ್ದೆ ಎಂಬ ಆಸೆ ಇತ್ತು. ಈಗ ನಾನು ಶಾಸಕನಾಗಿದ್ದೇನೆ ಆವತ್ತು ನಾನು ವ್ಯಕ್ತಪಡಿಸಿದ ಆಸೆಯನ್ನು ನಾನೇ ಈಡೇರಿಸಲಿದ್ದೇನೆ. ನಾನು ಎಂದೂ ಭೃಷ್ಟಾಚಾರದ ವಿರುದ್ದವೇ ಇದರಲ್ಲಿ ರಾಜಿಯೇ ಇಲ್ಲ ಎಂದುಶಾಸಕರು ಹೇಳಿದರು.

 

ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಸಕ್ರಮ ಭೈಠಕ್ ನಡೆದಿಲ್ಲ ಮೊದಲ ಬಾರಿಗೆ ಪುತ್ತೂರಿನಲ್ಲಿ ಬೈಠಕ್ ನಡೆದ ಆರಂಭದ ಅಂಗವಾಗಿ  12 ಕಡತಗಳನ್ನು ವಿಲೇವಾರಿ ಮಾಡಲಾಗುತ್ತದೆ. ಕಂದಾಯ ಸಚಿವರ ಬಳಿ ಒತ್ತಡ ತಂದು ಕಾರ್ಯವನ್ನು ಮಾಡುತ್ತಿದ್ದೇನೆ. 94 ಸಿ ಹಕ್ಕು ಪತ್ರ ಅರ್ಜಿ ಹಾಕಿದ ಎಲ್ಲರಿಗೂ ದೊರೆಯಲಿದೆ ಎಂದು ಹೇಳಿದರು.

ಒಟ್ಟು‌19 ಮಂದಿಗೆ 94 ಸಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಶಾಸಕರು ತಿಳಿಸಿದ್ದು ಇದುವರೆಗೆ ಒಟ್ಡು 2400 ಹಕ್ಕು ಪತ್ರ ವಿತರಣೆ ನಡೆದಿದೆ ಎಂದು ಶಾಸಕರು ಹೇಳಿದರು.

 

 

ಈಗಿನ ತಹಶಿಲ್ದಾರನ್ನು ನಮಗೆ ಕೊಡಿಎಂದು ಕಂದಾಯಸಚಿವರ ಬಳಿ ಒತ್ತಡ ತಂದು ಕರೆಸಿದ್ದೇನೆ. ಇವರು ತಹಶಿಲ್ದಾರ್ ಆಗಿದ್ದ ವೇಳೆ 28000 ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿದ್ದರು ಅದಕ್ಕಾಗಿ ಅವರನ್ನು ಕರೆಸಿದ್ದೇನೆ.‌ಮುಂದೆ ಅವರು ಪುತ್ತೂರು ತಾಲೂಕಿನಲ್ಲಿ ಬಾಕಿ ಇರುವ ಎಲ್ಲಾ ಕಡತಗಳನ್ನಹ ಸಮರ್ಪಕವಾಗಿ ವಿಲೇವಾರಿ ಮಾಡಲಿದ್ದಾರೆ ಎಂದು ಹೇಳಿದರು.

 

ಅಕ್ರಮ ಸಕ್ರಮ 94 ಸಿ ಹಕ್ಕು ಪತ್ರ ವಿತರಣೆ ಮಾಡುವಾಗ ರಾಜಕೀಯ ಮಾಡಲ್ಲ ಅದರ ಅಗತ್ಯವೂ ನನಗಿಲ್ಲ. ನಾನು ಶಾಸಕನಾದ ಮೇಲೆ ರಾಜಧರ್ಮ ಪಾಲಿಸಬೇಕು ,ರಾಜಧರ್ಮ ಪಾಲನೆ ಮಾಡದವರಾದರೆ ಜನಪ್ರತಿನಿಧಿಯಾಗಿ ಅರ್ಥವಿಲ್ಲ. ಅರ್ಹ ಎಲ್ಲರಿಗೂ ಹಕ್ಕು ಪತ್ರ ಕೊಡುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

 

ಅಕ್ರಮ ಸಕ್ರಮ ಫೈಲು ವಿಲೇವಾರಿಮಾಡುವಾಗ ಯಾರಾದ್ರು ಲಂಚ ಕೇಳಿದ್ರೆ ತಕ್ಷಣ ನನ್ನಗಮನಕ್ಕೆ ತನ್ನಿ .ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.