ವರದಿ: ಕವಿತಾ ಕೆ ಮಾಣಿ
ಪುತ್ತೂರಿನ ಹೊಟೇಲ್ ವೊಂದರ ಸಪ್ಲಾಯರ್ ನಾಪತ್ತೆಯಾಗಿದ್ದು ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತನ ಪತ್ನಿ ಪುತ್ತೂರು ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ನೆಲ್ಲಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವ ಬೊಳುವಾರಿನ ಹೊಟೇಲ್ ಒಂದರಲ್ಲಿ ಸಪ್ಲಾಯರ್ ಆಗಿದ್ದ ಕೆಲಸ ಮಾಡುತ್ತಿದ್ದ ಶಿವಪ್ಪ ಯಾನೆ ಶಿವಣ್ಣ (45) ನಾಪತ್ತೆಯಾದವರು.
ಪತ್ನಿ ಗೀತಾ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಅವರು ಬೊಳುವಾರಿನ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಜೂ.10ರಂದು ಬೆಳಿಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿಲ್ಲ. ಆದರೆ ಈ ಹಿಂದೆಯೂ ಅದೇ ರೀತಿ ಮನೆಯಿಂದ ಹೋದವರು ವಾರ ಕಳೆದು ಬಂದಿದ್ದರು. ಹಾಗಾಗಿ ಅದೇ ರೀತಿ ಅವರು ಹಿಂದಿರುಗಿ ಬರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಆದರೂ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Social Icons